ಮೇ 2 ರಂದು ಪಿಆರ್‍ಓ, ಎಪಿಆರ್‍ಓ ಮತ್ತು ಪಿಓ ಅವರಿಗೆ ತರಬೇತಿಗೆ ಹಾಜರಾಗಲು ಆಯಾ ಬಸ್‍ನಿಲ್ದಾಣದಿಂದ ಬಸ್ ವ್ಯವಸ್ಥೆ

ಕಲಬುರಗಿ,ಮೇ.01:ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಇದೇ ಮೇ 2 ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲೆಯ 34-ಅಫಜಲಪೂರ, 35-ಜೇವರ್ಗಿ, 40-ಚಿತ್ತಾಪೂರ, 41-ಸೇಡಂ, 42-ಚಿಂಚೋಳಿ ಹಾಗೂ 46-ಆಳಂದ ವಿಧಾನಸಭಾ ಮತಕ್ಷೇತ್ರಗಳಲ್ಲಿ ಪಿಆರ್‍ಓ, ಎಪಿಆರ್‍ಓ ಹಾಗೂ ಪಿಓ ಅವರಿಗೆ ತರಬೇತಿ ಆಯೋಜಿಸಿದ್ದು, ಸದರಿ ತರಬೇತಿಗೆ ಹೋಗಲು ಹಾಜರಾಗಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಮಾಡಲಾಗಿದೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ.ಗುರುಕರ್ ಅವರು ತಿಳಿಸಿದ್ದಾರೆ.

ಪ್ರಯಾಣದ ವೆಚ್ಚವನ್ನು ತರಬೇತಿ ಸಿಬ್ಬಂದಿಗಳು ಸ್ವಂತ ಖರ್ಚಿನಿಂದ ಟಿಕೆಟ್ ಪಡೆದು ಪ್ರಯಾಣಿಸಬೇಕೆಂದು ಅವರು ತಿಳಿಸಿದ್ದಾರೆ. ಆಯಾ ಬಸ್ ನಿಲ್ದಾಣದಿಂದ ವಿವಿಧ ಸ್ಥಳಗಳಿಗೆ ತೆರಳುವ ಬಸ್‍ಗಳ ಸಮಯದ ವಿವರ ಹೀಗಿದೆ.

ಕಲಬುರಗಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 7 ಗಂಟೆಗೆ ಅಫಜಲಪುರ, ಜೇವರ್ಗಿ, ಚಿತ್ತಾಪುರ , ಸೇಡಂ ಮತ್ತು ಬೆಳಿಗ್ಗೆ 5.30 ಗಂಟೆಗೆ ಚಿಂಚೋಳಿ ಹಾಗೂ ಬೆಳಿಗ್ಗೆ 7 ಆಳಂದಕ್ಕೆ ಬಸ್ ಹೊರಡಲಿದೆ.  
    ಅಫಜಲಪೂರ ಬಸ್ ನಿಲ್ದಾಣದಿಂದ ಬೆಳಿಗ್ಗೆ 7 ಗಂಟೆಗೆ ಕಲಬುರಗಿ, ಜೇವರ್ಗಿ, ಚಿತ್ತಾಪೂರ, ಸೇಡಂ ಮತ್ತು ಬೆಳಿಗ್ಗೆ 5 ಚಿಂಚೋಳಿ ಹಾಗೂ ಬೆಳಿಗ್ಗೆ 7 ಗಂಟೆಗೆ ಆಳಂದಕ್ಕೆ ಬಸ್ ಹೊರಡಲಿದೆ. 
   ಜೇವರ್ಗಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 7 ಗಂಟೆಗೆ ಕಲಬುರಗಿ, ಅಫಜಲಪೂರ, ಚಿತ್ತಾಪೂರ, ಸೇಡಂ ಮತ್ತು ಬೆಳಿಗ್ಗೆ 5.30 ಗಂಟೆಗೆ ಚಿಂಚೋಳಿ ಹಾಗೂ ಬೆಳಿಗ್ಗೆ 7 ಗಂಟೆಗೆ ಆಳಂದಕ್ಕೆ ಬಸ್ ಹೊರಡಲಿದೆ.
ಚಿತ್ತಾಪುರ ಬಸ್ ನಿಲ್ದಾಣದಿಂದ ಬೆಳಿಗ್ಗೆ 7 ಗಂಟೆಗೆ ಕಲಬುರಗಿ, ಅಫಜಲಪೂರ, ಜೇವರ್ಗಿ, ಸೇಡಂ, ಬೆಳಿಗ್ಗೆ 5.30 ಗಂಟೆಗೆ ಚಿಂಚೋಳಿ ಹಾಗೂ ಬೆಳಿಗ್ಗೆ 7 ಗಂಟೆಗೆ ಆಳಂದಕ್ಕೆ ಬಸ್ ಹೊರಡಲಿದೆ.

ಸೇಡಂ ಬಸ್ ನಿಲ್ದಾಣದಿಂದ ಬೆಳಿಗ್ಗೆ 7 ಗಂಟೆಗೆ ಕಲಬುರಗಿ, ಅಫಜಲಪೂರ, ಜೇವರ್ಗಿ, ಚಿತ್ತಾಪೂರ ಮತ್ತು ಬೆಳಿಗ್ಗೆ 5.30 ಗಂಟೆಗೆ ಚಿಂಚೋಳಿ ಹಾಗೂ ಬೆಳಿಗ್ಗೆ 7 ಗಂಟೆಗೆ ಆಳಂದಕ್ಕೆ ಬಸ್ ಹೊರಡಲಿದೆ.

ಚಿಂಚೋಳಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 7 ಗಂಟೆಗೆ ಕಲಬುರಗಿ, ಅಫಜಲಪೂರ, ಜೇವರ್ಗಿ, ಚಿತ್ತಾಪೂರ, ಸೇಡಂ ಹಾಗೂ ಬೆಳಿಗ್ಗೆ 5 ಗಂಟೆಗೆ ಆಳಂದಕ್ಕೆ ಬಸ್ ಹೊರಡಲಿದೆ.

ಆಳಂದ ಬಸ್ ನಿಲ್ದಾಣದಿಂದ ಬೆಳಿಗ್ಗೆ 7 ಗಂಟೆಗೆ ಕಲಬುರಗಿ, ಅಫಜಲಪೂರ, ಜೇವರ್ಗಿ, ಚಿತ್ತಾಪೂರ ಮತ್ತು ಬೆಳಿಗ್ಗೆ 5.30 ಗಂಟೆಗೆ ಸೇಡಂ ಹಾಗೂ ಬೆಳಿಗ್ಗೆ 7 ಗಂಟೆಗೆ ಚಿಂಚೋಳಿಗೆ ಬಸ್ ಹೊರಡಲಿದೆ.
  ಸಂಬಂಧಪಟ್ಟ ಆಯಾ ವಿಧಾನಸಭಾ ಮತಕ್ಷೇತ್ರಗಳ ಬಸ್ ನಿಲ್ದಾಣಗಳಿಗೆ  ತಲುಪಿಸುವುದು ಹಾಗೂ ತರಬೇತಿ ಮುಗಿದ ನಂತರ ಆಯಾ ಬಸ್ ನಿಲ್ದಾಣಗಳಿಗೆ ವಾಪಸ್ಸು ಕರೆತರಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.