ಮೇ. 2 ರಂದು ಕೊಪ್ಪಳ ಐತಿಹಾಸಿಕ ಪುರ ಉತ್ಸವ

ಕೊಪ್ಪಳ, ಮಾ. 27: ಜಿಲ್ಲೆಯ ಕುಷ್ಟಗಿ ತಾಲೂಕಿನ ಪುರ ಗ್ರಾಮದಲ್ಲಿ ಐತಿಹಾಸಿಕ ಪುರ ಉತ್ಸವ ಆಚರಿಸಲಾಗುತ್ತದೆ ಎಂದು ಉತ್ಸವದ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಪ್ರಕಟಣೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮೊದಲ ಐತಿಹಾಸಿಕ ಕನಕಗಿರಿ ಉತ್ಸವ, ಗಂಡುಗಲಿ ಕುಮಾರರಾಮ ಉತ್ಸವ ಆರಂಭಿಸಿದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ, ಕನ್ನಡ ಜಾನಪದ ಪರಿಷತ್ ಸಹಭಾಗಿತ್ವದಲ್ಲಿ ಆಚರಿಸಲಾಗುತ್ತದೆ.
ಉತ್ಸವವನ್ನು ಕೋವಿಡ್ ಮಾರ್ಗ ಸೂಚಿಯ ಪಾಲನೆಯೊಂದಿಗೆ ಆಚರಿಸಲು ನಿರ್ಧರಿಸಲಾಗಿದ್ದು. ಕನ್ನಡ ಪರ ಸಂಘಟನೆಗಳು ಮತ್ತು ಮುಖಂಡರ ಪೂರ್ವಭಾವಿ ಸಭೆಯನ್ನು ಎಪ್ರಿಲ್ 4 ರಂದು ಬೆಳಿಗ್ಗೆ 11 ಗಂಟೆಗೆ ಪುರ ಗ್ರಾಮದ ಐತಿಹಾಸಿಕ ಸೋಮೇಶ್ವರ ದೇವಸ್ಥಾನ (ಕೋಟಿಲಿಂಗ ದೇವಸ್ಥಾನ) ದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು. ಉತ್ಸವದ ನಿಮಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಐತಿಹಾಸಿಕತೆ ಕುರಿತು ಗೋಷ್ಠಿ, ಕಲಾ ಪ್ರದರ್ಶನ ಮತ್ತು ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗುವದು. ಸಭೆಯಲ್ಲಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಲು ಕೋರಿದ್ದಾರೆ. ಮಾಹಿತಿಗಾಗಿ ಮೊ. 9448300070 ಸಂಪರ್ಕಿಸಬಹುದು.