ಮೇ.17 ರಂದು ರೇಣುಕರ ಅದ್ದೂರಿ ಜಯಂತಿಗೆ ನಿರ್ಧಾರ

ಕಾಳಗಿ.ಎ.8: ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತ್ಯುತ್ಸವ ಶ್ರದ್ಧೆ, ಭಕ್ತಿಯಿಂದ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಮೇ.17ರಂದು ಪಟ್ಟಣದಲ್ಲಿ
ರೇಣುಕರ ಸಂದೇಶ ಜನರಿಗೆ ತಲುಪಿಸುವಂತೆ ರೇಣುಕಾಚಾರ್ಯ ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಯಂತಿ ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲಿನಾಥ ಪಾಟೀಲ ಕಾಳಗಿ ಹೇಳಿದರು.

ಪಟ್ಟಣದ ಶಿವಬಸವೇಶ್ವರ ಹಿರೇಮಠದಲ್ಲಿ ರೇಣುಕಾಚಾರ್ಯ ಜಯಂತೋತ್ಸವ ಪೂರ್ವಸಿದ್ಧತಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ರೇಣುಕಾಚಾರ್ಯ ಸಂದೇಶ ಸಾರುವ ನಿಟ್ಟಿನಲ್ಲಿ ಮೇ.17ರಂದು ಜರುಗುವ ರೇಣುಕಾಚಾರ್ಯ ಜಯಂತೋತ್ಸವದಲ್ಲಿ ರಂಭಾಪುರಿ ಜಗದ್ಗುರುಗಳು ಭಾಗವಹಿಸುತ್ತಿದ್ದಾರೆ. ಅಂದು ಬೆಳಗ್ಗೆ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ನೀಲಕಂಠ ಕಾಳೇಶ್ವರ ದೇವಸ್ಥಾನದ ವರೆಗೆ ಎಂಟು ಅಡಿ ಎತ್ತರದ ಕಂಚಿನ ರೇಣುಕಾಚಾರ್ಯರ ಭವ್ಯ ಮೂರ್ತಿ ಹಾಗೂ ಸಾರೋಟಿನಲ್ಲಿ ರಂಭಾಪುರಿ ಜಗದ್ಗುರುಗಳ ಭವ್ಯ ಮೆರವಣಿಗೆ ಜರುಗುವುದು. ಮೆರವಣಿಗೆಯುದ್ದಕ್ಕೂ ಮುತೈದಿಯರ ಕುಂಭ ಕಳಸ, ಪುರುವಂತರ ಕುಣಿತ, ಡೊಳ್ಳು ಕುಣಿತ, ವೀರಗಾಸೆ ನೃತ್ಯ ಸೇರಿದಂತೆ ವಿವಿಧ ಕಲಾತಂಡಗಳು ಭಾಗಹಿಸಲಿವೆ. ನಂತರ ಬೃಹತ್ ಧಾರ್ಮಿಕ ಸಭೆ ಜರುಗುವುದು. ತಾಲೂಕಿನ ಎಲ್ಲಾ ಗ್ರಾಮದ ಮುಖಂಡರು, ಸಾರ್ವಜನಿಕರು ಜಯಂತಿಗೆ ಸಹಕಾರ ನೀಡಬೇಕೆಂದು ಹೇಳಿದರು.

ಜಯಂತೋತ್ಸವ ಸಮಿತಿ ಅಧ್ಯಕ್ಷರಾಗಿ ನಾಗರಾಜ ಚಿಕ್ಕಮಠ, ಗೌರವಾಧ್ಯಕ್ಷರಾಗಿ ಶಿವರಾಜ ಪಾಟೀಲ ಗೊಣಗಿ, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಲ್ಲಿನಾಥ ಪಾಟೀಲ ಕಾಳಗಿ ಅವರಿಗೆ ಆಯ್ಕೆ ಮಾಡಲಾಯಿತು.

ಜಂಗಮ ಸಮಾಜ ತಾಲೂಕಾಧ್ಯಕ್ಷ
ಶರಣು ಸಾಲಿಮಠ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶರಣಗೌಡ ಪೆÇಲೀಸ್ ಪಾಟೀಲ, ಮುಖಂಡರಾದ ಶಿವಶರಣಪ್ಪ ಕಮಲಾಪುರ, ನಿಕಟಪೂರ್ವ ಜಯಂತೋತ್ಸವ ಸಮಿತಿ ಅಧ್ಯಕ್ಷ ಶಿವಕುಮಾರ್ ಕಮಲಾಪೂರ, ಅಣ್ಣರಾವ ಪೆದ್ದಿ, ಸೋಮಣ್ಣ ಹಲಚೇರಾ, ವೀರಣ್ಣಾ ಗಂಗಾಣಿ, ಚನ್ನಯ್ಯಸ್ವಾಮಿ ಭರತನೂರ, ಸಿದ್ದು ಸಾಹು ಡೊಣ್ಣೂರ, ನಾಗರಾಜ ಕೇಶ್ವರ, ರಾಜು ಸೀಳಿನ, ಜಗದೀಶ್ ಮಾಲಿಪಾಟೀಲ, ಜಗಯ್ಯಸ್ವಾಮಿ ಡೊಣ್ಣೂರ, ವೀರಯ್ಯಸ್ವಾಮಿ ಮುಕರಂಬಾ, ಶರಣಪ್ಪ ಕೊರವಿ, ಶಿವಕುಮಾರ್ ಸುಲೇಪೇಟ್, ಶಿವಕುಮಾರ್ ವಚ್ಚಾ, ಭೀಮಾಶಂಕರ ಪಾಟೀಲ, ಶಿವಕುಮಾರ್ ಶಾಸ್ತ್ರಿ, ನೀಲಕಂಠ ಮಡಿವಾಳ, ಗುರುನಂಜಯ್ಯಸ್ವಾಮಿ ಹಿರೇಮಠ, ಸೋಮಣ್ಣ ಮಾಕಪನೋರ, ಪರಮೇಶ್ವರ ಮಡಿವಾಳ, ಶಂಕರ ಚೌಕ, ಶರಣಪ್ಪ ಮಳಗಿ, ಚನ್ನಪ್ಪ ಮುಕರಂಬಿ, ಶರಣು ಚಂದಾ, ಹಣಮಂತ ಮಳಖೇಡ, ಶೇಖರ ಮಾನಶೆಟ್ಟಿ, ಭದ್ರಪ್ಪ ಸಲಗುರ, ಶಿವಕಿರಣ ಪ್ಯಾಟಿಮಠ ಇದ್ದರು.