ಮೇ 13 ಹಾಗೂ 14 ರಂದು ನಿಗಮದಿಂದ ವಿಶೇಷ (ಹೆಚ್ಚಿನ) ಬಸ್‍ಗಳ ಕಾರ್ಯಾಚರಣೆ

ಕಲಬುರಗಿ,ಮೇ.12:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-2ರಿಂದ ಕಲಬುರಗಿಯಿಂದ ಬೆಂಗಳೂರಿಗೆ ಹೆಚ್ಚಿನ ಜನಸಂದಣಿ ನೀರಿಕ್ಷಿಸಿ ಇದೇ ಮೇ 13 ಹಾಗೂ 14 ರಂದು ಬೆಂಗಳೂರಿಗೆ ಹೋಗುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕಲಬುರಗಿ ಕೇಂದ್ರ ಬಸ್ ನಿಲ್ದಾಣ ಹಾಗೂ ಆಳಂದ, ಜೇವರ್ಗಿ ಹಾಗೂ ಅಫಜಲಪುರ ತಾಲೂಕು ಕೇಂದ್ರಗಳಿಂದ ವಿಶೇಷ (ಹೆಚ್ಚಿನ) ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ 2ರ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ಸದರಿ ಹೆಚ್ಚುವರಿ ವಾಹನಗಳ ಟಿಕೇಟ್‍ಗಳನ್ನು ಮುಂಗಡವಾಗಿ ನಿಗಮದ www.ksrtc.org ವೆಬ್‍ಸೈಟ್‍ದಲ್ಲಿ ಆನ್‍ಲೈನ್ ಮೂಲಕ ಕಾಯ್ದಿರಿಸಿಕೊಳ್ಳಬಹುದಾಗಿದೆ. ಇದಲ್ಲದೇ ಹೆಚ್ಚುವರಿ ವಾಹನಗಳಿಗಾಗಿ ವಿಭಾಗೀಯ ಸಂಚಾರ ಅಧಿಕಾರಿ ಇವರ ಮೊಬೈಲ್ ಸಂಖ್ಯೆ ರವೀಂದ್ರಕುಮಾರ-7760984086, ಸಹಾಯಕ ಸಂಚಾರ ವ್ಯವಸ್ಥಾಪಕಿ-ಪ್ರೀತಿ ಕಾಳೆ-7760993920, ಕಲಬುರಗಿ ಕೇಂದ್ರ ಬಸ್ ನಿಲ್ದಾಣದಿಂದ ಸ.ಸಂ.ಅ -ಅನಿಲಕುಮಾರ -8618637395 ಹಾಗೂ ಕೇಂದ್ರ ಬಸ್ ನಿಲ್ದಾಣ ಮುಂಗಡ ಟಿಕೇಟ್ ಕಾಯ್ದಿರಿಸುವಿಕೆ 7760992124 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. ಸಾರ್ವಜನಿಕರು ಇದ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.