ಮೇ 13ರಿಂದ ಹಜರತ್ ಬಾಬಾ ಫಕ್ರೋದ್ದೀನ್ ಕೂಡಿ ಜಾತ್ರಾ ಮಹೋತ್ಸವ

ಕಲಬುರಗಿ:ಮೇ.11:ಪ್ರತಿವರ್ಷದಂತೆ ಈ ವರ್ಷವೂ ಜೇವರ್ಗಿ ತಾಲೂಕಿನ ಹಜರತ್ ಬಾಬಾ ಫಕ್ರೋದಿನ್ ಸಹರವರ್ದಿ ಕೂಡಿ 751ನೇ ಜಾತ್ರಾ ಮಹೋತ್ಸವ ದರ್ಗಾ ಕಮಿಟಿ ,ಕೂಡಿ, ಕೋಬಾಳ ,ಬಣಮಿ, ಮಂದರವಾಡ, ಹಿಪ್ಪರಗಾ ಕೋನಾ, ಗ್ರಾಮಗಳ ಭಕ್ತರಿಂದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಗ್ರಾಮ ಪಂಚಾಯತ್ ಸದಸ್ಯರಾದ ಜಗನ್ನಾಥ್ ನಿಂಗಬೋ ಕೋಬಾಳ್ ಅವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. ದಿನಾಂಕ 13.05.2024 ರಂದು ಸೋಮವಾರ ಸಂದಲ್ ಮಾಲಿ (ಗಂಧ) ಜರುಗಲಿದ್ದು ದಿನಾಂಕ 14-05_2024 ರಂದು ಮಂಗಳವಾರ ದೀಪ ಅಲಂಕಾರ (ಚಿರಾಗಾ) ಹಾಗೂ ಇದೆ ದಿನ ಎಮ್ ಎಸ್ ಕೆ ಮಿಲ್ ಜಿಲಾನಬಾಧ ಗುಲ್ಬರ್ಗಾ ಸದ್ಭಕ್ತರಿಂದ ಸಹಿತ ದಿಪೆÇೀತ್ಸವ ಕಾರ್ಯಕ್ರಮ ಬಹು ವಿಜೃಂಭಣೆಯಿಂದ ನಡೆಸಲಾಗುತ್ತದೆ ಹಾಗೂ ಈ ದಿನ ರಾತ್ರಿ 10 ಗಂಟೆಯಿಂದ ಗೀಗಿ ಪದಗಳು ಹಾಗೂ ಖವಾಲಿ ಕಾರ್ಯಕ್ರಮ ನಡೆಯುತ್ತವೆ ದಿನಾಂಕ 15 -5- 2024 ರಂದು ಬುಧವಾರ ಮುಂಜಾನೆ 8 ರಿಂದ 10 ಗಂಟೆಯವರೆಗೆ ಹಾಗೂ ಸಂಜೆ 4 ರಿಂದ 6:00 ವರೆಗೆ ಜಂಗಿ ಪೈಲ್ವಾನರ ಕುಸ್ತಿ ನಡೆಯಲಿವೆ, ವಿಶೇಷ ಸೂಚನೆ: ಜೇವರ್ಗಿ ಹಾಗೂ ಗುಲ್ಬರ್ಗದಿಂದ ಕೂಡಿ ದರ್ಗಾದವರಿಗೆ ಹಾಗೂ ಕೂಡಿವರೆಗೆ ವಿಶೇಷ ಬಸ್ಸಿನ ಸೌಕರ್ಯ ಇರುತ್ತದೆ ಎಂದು ಗ್ರಾಮ ಪಂಚಾಯತ್ ಕೂಡಿ ಅಧ್ಯಕ್ಷರು ಸರ್ವ ಪದಾಧಿಕಾರಿಗಳು ಹಾಗೂ ಸದ್ಭಕ್ತ ಮಂಡಳಿ ದರ್ಗಾ ಕೂಡಿ ಯವರು ಮನವಿ ಮಾಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ನಾಡಿನ ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಿದ್ದಾರೆ.