ಮೇ 1 ರಿಂದ ಲಸಿಕೆ: ಪರಿಣಾಮಕಾರಿ ಅನುಷ್ಠಾನ: ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ನವದೆಹಲಿ, ಏ.24- ದೇಶದಲ್ಲಿ 18 ದಾಟಿದ ಎಲ್ಲರಿಗೂ ಮೇ. 1 ರಿಂದ ಕೊರೊನಾ ಲಸಿಕೆ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ‌ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಲಸಿಕೆ ನೀಡಿಕೆಯನ್ನು ಯಶಸ್ವಿ ಅನುಷ್ಠಾನ ಮಾಡುವುದು ಸೇರಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ.

18 ವರ್ಷ ದಾಟಿದ ಎಲ್ಲರಿಗೂ ಲಸಿಕೆ ಹಾಕುವ ನಿರ್ಧಾರ ಕೈಗೊಂಡಿರುವ ವಿಶ್ವದ ಮೊದಲ ದೇಶ ಭಾರತ ವಾಗಿರುವ ಹಿನ್ನೆಲೆಯಲ್ಲಿ ಯಶಸ್ವಿ ಅನುಷ್ಠಾನ ಮಾಡುವಂತೆ ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚನೆ ನೀಡಿದೆ.

ಈ ಕುರಿತು ದೆಹಲಿಯಲ್ಲಿ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ಕೋವಿಡ್ ಸಬಲೀಕರಣ ಗುಂಪಿನ ಅಧ್ಯಕ್ಷ ಡಾ. ಆರ್‌.ಎಸ್ ಶರ್ಮ ಅವರು, ಮೇ 1ರ ಬಳಿಕ ಲಸಿಕೆ ನೀಡಿಕೆ ಆರಂಭವಾದ ನಂತರ ಅದರ ಪ್ರಗತಿಪರಿಶೀಲನಾ ಕಾಲಕಾಲಕ್ಕೆ ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.

ಕರೋನಾ ಲಸಿಕೆ ನೀಡಿಕೆ ಸಂಬಂಧ ಮೂಲಸೌಕರ್ಯ ಪರಿಶೀಲನೆಣ ಆಸ್ಪತ್ರೆಗಳಲ್ಲಿ ಸೌಲಭ್ಯಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಕಾಲಕಾಲಕ್ಕೆ ಪರಿಶೀಲನೆ ನಡೆಸಿ ಹೆಚ್ಚು ಮಂದಿ ಯುವಜನತೆಗೆ ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ವಿಶ್ವದಲ್ಲಿ ಮೊದಲ ಬಾರಿಗೆ ಯುವಜನರಿಗೆ ಲಸಿಕೆ ಹಾಕುವ ಕೆಲಸವನ್ನು ಭಾರತದಲ್ಲಿ ಮಾಡಲಾಗುತ್ತಿದೆ ಹೀಗಾಗಿ ಯಾವುದೇ ಕಾರಣಕ್ಕೂ ಅದು ವಿಫಲವಾಗುವಂತೆ ನೋಡಿಕೊಳ್ಳಬೇಕು .ಗುರಿ ಹಾಕಿಕೊಂಡು ಅದನ್ನು ಪೂರೈಸಲು ಕ್ರಮಕೈಗೊಳ್ಳಬೇಕೆಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯಗಳಿಗೆ ಬೇಕಾಗುವ ಲಸಿಕೆಯ ಪೈಕಿ ಶೇಕಡ 50ರಷ್ಟು ಲಸಿಕೆಯನ್ನು ಕೇಂದ್ರ ಸರ್ಕಾರ ಉಚಿತವಾಗಿ ನೀಡಲಿದ್ದು ಇನ್ನು ಉಳಿದ ಶೇಕಡಾ 50 ರಷ್ಟನ್ನು ರಾಜ್ಯ ಸರ್ಕಾರಗಳು ಮುಕ್ತಮಾರುಕಟ್ಟೆಯಲ್ಲಿ ಕಲಿಸಬೇಕು ಎಂದು ಅವರು ಹೇಳಿದ್ದಾರೆ.

ಯಾವ ಯಾವ ರಾಜ್ಯಗಳಿಗೆ ಎಷ್ಟು ಲಸಿಕೆ ಅಗತ್ಯವಿದೆ ಎನ್ನುವುದನ್ನು ಮೇ.1 ರ ಒಳಗಾಗಿ ಕೇಂದ್ರ ಸರ್ಕಾರಕ್ಕೆ ತಿಳಿಸುವಂತೆ ಅವರು ಸೂಚನೆ ನೀಡಿದ್ದಾರೆ