ಮೇ 1ರಿಂದ ಮುಂದಿನ ಆದೇಶದವರಿಗೆ ಮಂತ್ರಾಲಯ ಬಂದ್

ರಾಯಚೂರು, ಏ. 30 :- ಕೊರೊನಾ ಮಹಾಮಾರಿ ಹಿನ್ನೆಲೆ ಮೇ 1 ರಿಂದ ಮುಂದಿನ ನಿರ್ಧಾರದವರಿಗೆ ನಡೆದಾಡುವ ದೇವರ ಸನ್ನಿದಾನ ಮಹಿಮಾ ಕೇಂದ್ರ ಮಂತ್ರಾಲಯ ಲಾಕ್ ಡೌನ್.
ಮಂತ್ರಾಲಯ ಪೀಠಾಧಿಪತಿಗಳಾದ ಶ್ರೀ ಸುಬುದೇಂದ್ರ ತೀರ್ಥ ಶ್ರೀ ಪಾದಂಗಳ ಅವರು ಸೂಚನೆಯ ಮೇರೆಗೆ ಮಠದ ವ್ಯವಸ್ಥಾಪಕರಾದ ವೆಂಕಟೇಶ ಜೋಷಿ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಕೊರೊನಾ ಮಹಾ ಮಾರಿ ತೀವ್ರವಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಶ್ರೀ ರಾಯರ ದರ್ಶನ ರದ್ದು ಮಾಡಲಾಗಿತ್ತು. ಎರಡನೇ ಅಲೆ ಈ ವರ್ಷವು ಮತ್ತೆ ರಾಯರ ದರ್ಶನ ನಿಲ್ಲಿಸಲಾಗಿದೆ. ಮುಂದಿನ ಆದೇಶದ ವರಿಗೆ ಭಕ್ತರಿಗೆ ಮಂತ್ರಾಲಯಕ್ಕೆ ಬರಲು ಅವಕಾಶ ಇರುವುದಿಲ್ಲ.
ಶ್ರೀ ಮಠದಲ್ಲಿ ಎಂದಿನಂತೆ ರಾಯರ ಸೇವಾ ಕಾರ್ಯ ನಡೆಸಲಾಗುತ್ತದೆ.ಅನ್ ಲೈನ್ ಮೂಲಕ ಸೇವೆಗಳಲ್ಲಿ ಪಾಲ್ಗೊಳ್ಳ ಬಹುದಾಗಿದೆ ಎಂದು ಶ್ರೀ ಮಠ ತಿಳಿಸಿದೆ.