ಮೇ 1ರಿಂದ ಬಬಲೇಶ್ವರ ಮತಕ್ಷೇತ್ರದಲ್ಲಿ ಉಚಿತ ಕೋವಿಡ್ ಲಸಿಕೋತ್ಸವ: ಎಂ.ಬಿ.ಪಾಟೀಲ್

ವಿಜಯಪುರ, ಏ.29-ಬಬಲೇಶ್ವರ ವಿಧಾನಸಭಾಕ್ಷೇತ್ರದ ವ್ಯಾಪ್ತಿಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೊವಿಡ್-19 ಲಸಿಕೋತ್ಸವ ಅಭಿಯಾನವನ್ನು ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್‍ರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಡಳಿತ, ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಪ್ರಥಮ ಹಂತದಅಭಿಯಾನ ಮೇ 1ರಿಂದ ಮೇ 7ರ ವರೆಗೆ ನಡೆಯಲಿದ್ದು, ಆಯಾ ಗ್ರಾಮಗಳ ಸರ್ಕಾರಿ ಶಾಲೆಗಳ ಆವರಣದಲ್ಲಿ ಪ್ರತಿ ದಿನ ಬೆ.9 ರಿಂದ ಸಂ.4ಗಂ.ವರೆಗೆ 18ವರ್ಷ ಮೇಲ್ಪಟ್ಟಎಲ್ಲರಿಗೂ ಲಸಿಕೆ ನೀಡಲಾಗುತ್ತದೆ.
ಮೇ 1 ಶನಿವಾರರಂದು ಬೆ.9 ರಿಂದ ಸಂ.4ಗಂ.ವರೆಗೆ ಬಬಲೇಶ್ವರ, ಮಮದಾಪುರ, ತಿಕೋಟಾ, ದಿ.2 ರವಿವಾರರಂದುಕಾಖಂಡಕಿ, ಜೈನಾಪುರ, ಬಾಬಾನಗರ, ದಿ.3 ಸೋಮವಾರರಂದುಸಾರವಾಡ, ದೇವರಗೆಣ್ಣೂರ, ಬಿಜ್ಜರಗಿ, ದಿ.4ಮಂಗಳವಾರರಂದು ನಿಡೋಣಿ, ಹೊಸೂರ, ಕನಮಡಿ, ದಿ.5 ಬುಧವಾರರಂದುಅರ್ಜುಣಗಿ, ಬೋಳಚಿಕ್ಕಲಕಿ, ಹೊನವಾಡ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ.
ದಿ.6 ಗುರುವಾರರಂದುಕಂಬಾಗಿ, ಗುಣದಾಳ, ಘೋಣಸಗಿ ಹಾಗೂ ದಿ.7 ಶುಕ್ರವಾರರಂದುಕಾರಜೋಳ, ಕಣಬೂರ ಮತ್ತು ಟಕ್ಕಳಕಿ ಗ್ರಾಮಗಳಲ್ಲಿ ಉಚಿತ ಲಸಿಕೆ ನೀಡಲಾಗುತ್ತಿದ್ದು, 18ವರ್ಷದ ಮೇಲ್ಪಟ್ಟಎಲ್ಲರೂತಮ್ಮಆಧಾರಕಾರ್ಡ್ ದಾಖಲಾತಿಗಳೊಂದಿಗೆ ಬಂದು ಲಸಿಕೆ ಹಾಕಿಸಿಕೊಳ್ಳಲು ಶಾಸಕ ಎಂ.ಬಿ.ಪಾಟೀಲ್‍ಕ್ಷೇತ್ರದಜನತೆಯಲ್ಲಿಮನವಿ ಮಾಡಿದ್ದಾರೆ.