ಮೇ.೭ ರಂದು ಅಮಿತ್ ಶಾ ಮಸ್ಕಿಗೆ ಆಗಮನ

ಸಿಂಧನೂರು,ಏ.೨೮- ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಮೇ.೭ ರಂದು ಮಸ್ಕಿಗೆ ಬಂದು ಬೃಹತ ಸಾರ್ವಜನಿಕ ರೋಡ ಶೋ ನಡೆಸಲಿದ್ದಾರೆ ಆದ್ದರಿಂದ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮಾಜಿ ಶಾಸಕ ಹಾಗೂ ಬಿಜೆಪಿಯ ಮಸ್ಕಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾದ ಪ್ರತಾಪ ಪಾಟೀಲ ವಿವರ ನೀಡಿದರು
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೇ.೭ ರಂದು ಅಮಿತ ಷಾ ಅಂದು ಬೀದರ ಜಿಲ್ಲೆಗೆ ಬಂದು ನಂತರ ಮಧ್ಯಾಹ್ನ ೨ ಗಂಟೆಗೆ ಮಸ್ಕಿ ಪಟ್ಟಣಕ್ಕೆ ಬಂದು ನಗರದಲ್ಲಿ ಬೃಹತ್ ಸಾರ್ವಜನಿಕ ರೋಡ ಶೋ ನಡೆಸಲಿದ್ದಾರೆ ಎಂದು ಅವರು ಮೇ.೨ ರಂದು ಪ್ರಧಾನಿ ಸಿಂಧನೂರಿಗೆ ಬರಲಿದ್ದಾರೆ. ಅಮಿತ್ ಶಾ ಪ್ರಧಾನಿ ಬಂದು ಪಕ್ಷದ ಅಭ್ಯರ್ಥಿಗಳ ಪ್ರಚಾರ ನಡೆಸಲಿದ್ದಾರೆ. ಇದರಿಂದ ಮತಗಳ ಸುನಾಮಿಯಾಗಲಿದೆ ಎಂದರು.
ಹಿಂದಿನ ನಿಮ್ಮ ಸೋಲು ಈಗಿನ ನಿಮ್ಮ ಗೆಲುವಿಗೆ ಕಾರಣವೇನು ಎನ್ನುವ ಪ್ರಶ್ನೆಗೆ ಹಿಂದಿನ ಚುನಾವಣೆಯಲ್ಲಿ ಪಕ್ಷದಲ್ಲಿ ಇದ್ದವರೆ ನನಗೆ ಮೋಸ ಮಾಡಿದರು. ಅಲ್ಲದೆ ಹೊರಗಿನ ಜನ ಬಂದು ಚುನಾವಣೆ ಮಾಡಿದ್ದು ನನ್ನ ಸೋಲಿಗೆ ಕಾರಣ ಶಾಸಕ ಬಸನಗೌಡರ ಭ್ರಷ್ಟಾಚಾರ ಹಾಗೂ ಅವರ ಕುಟುಂಬ ದವರ ದೌರ್ಜನ್ಯಕ್ಕೆ ಜನ ಬೇಸತ್ತು ಹೋಗಿದ್ದಾರೆ.
ಶಾಸಕರು ಕಾರ್ಯಕರ್ತರನ್ನು ಕಡೆಗಣಿಸಿ ಕೇವಲ ೪ ಜನರಿಗೆ ಮಾತ್ರ ಕಾಮಗಾರಿಯ ಕೆಲಸ ನೀಡಿದ್ದು, ಈಗ ಅದೇ ೪ ಜನ ಗುತ್ತಿಗೆದಾರರು ಕ್ಷೇತ್ರದಲ್ಲಿ ಓಡಾಡಿ ಜನರಿಗೆ ಹಣ ಹಂಚುವ ಮೂಲಕ ಬಸನಗೌಡರ ಗೆಲವಿಗಾಗಿ ಶ್ರಮಿಸುತ್ತಿದ್ದಾರೆ ಇದರಿಂದ ಕಾರ್ಯ ಕರ್ತರಿಗೆ ಬೇಸರಗೊಂಡು ಬಿಜೆಪಿಗೆ ಬಂದು ನನ್ನ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಹಿಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನ ನನನ್ನು ಸೋಲಿಸಿ ಬಸನಗೌಡರನ್ನು ಗೆಲ್ಲಿಸಿದರು. ಆದರೆ ಜನರ ನಿರೀಕ್ಷೆಯಂತೆ ಅವರು ಕ್ಷೇತ್ರದಲ್ಲಿ ಅಬಿವೃದ್ಧಿ ಪರ ಕೆಲಸ ಮಾಡದೆ ಕಾಮಗಾರಿಯ ಹೆಸರಿನಲ್ಲಿ ಹಣ ಲೂಟಿ ಮಾಡಿದರು ತಾಲೂಕಿನ ಜನ ತಮ್ಮ ಕಷ್ಟ ಹೇಳಿಕೊಳ್ಳಲು ಪೋನ್ ಮಾಡಿದರೆ ಶಾಸಕರು ಪೋನ್ ಎತ್ತುವುದಿಲ್ಲ ಇದರಿಂದ ಜನರಿಗೆ ನೋವಾಗಿದೆ.
ನಾನು ಶಾಸಕನಾಗಿದ್ದಾಗಿ ಮುಂಜಾನೆ ೧೦ ಗಂಟೆಗೆ ಮನೆ ಬಿಟ್ಟು ಶಾಸಕರ ಕಾರ್ಯಲಯಕ್ಕೆ ಹೋದರೆ ಸಂಜೆ ೫ ಗಂಟೆಗೆ ಮನೆಗೆ ಬರುತ್ತಿದ್ದೆ ಅಂದರೆ ಒಬ್ಬ ಸರ್ಕಾರಿ ನೌಕರನಂತೆ ನಾನು ಕಛೇರಿಯಲ್ಲಿ ಇದ್ದು ಕ್ಷೇತ್ರದ ಜನರ ಕಷ್ಟ ಸುಖಗಳನ್ನು ಕೇಳಿ ಅವುಗಳಿಗೆ ಸೂಕ್ತ ಪರಿಹಾರ ಒದಗಿಸುವ ಕೆಲಸ ಮಾಡುತ್ತಿದ್ದೆ ೨೪ ಗಂಟೆ ನನ್ನ ಪೋನ್ ಆನ್ ಇದ್ದು ಯಾರೆ ಯಾವ ಸಮಯದಲ್ಲಿ ಪೋನ್ ಮಾಡಿದರೆ ಮಾತಾನಾಡಿ ಅವರ ನೋವು ಕಷ್ಟಗಳಿಗೆ ಸ್ಪಂದಿಸುತ್ತಿದ್ದೆ ಬಸನಗೌಡರನ್ನ ಗೆಲ್ಲಿಸಿ ಯಾಕೆ ಪ್ರತಾಪ ಪಾಟೀಲರನ್ನು ಸೋಲಿಸಿದ್ದೇವೆ ಎಂದು ಜನರು ಪಚ್ಚಾತ್ತಾಪ ಪಡುತ್ತಿದ್ದಾರೆ ಈಗ ಅವರಿಗೆ ತಮ್ಮ ತಪ್ಪಿನ ಅರಿವು ಆಗಿದೆ ಎಂದರು.
ಶಾಸಕ ಬಸನಗೌಡರ ಭ್ರಷ್ಟಾಚಾರ ಹಾಗೂ ಕಾರ್ಯಕರ್ತರ ಕಡೆಗಣೆನೆ ಅವರ ಕುಟುಂಬದವರ ದೌರ್ಜನ್ಯ ಅಧಿಕಾರ ಅವಧಿಯಲ್ಲಿ ಅಭಿವೃದ್ಧಿ ಮಾಡದೆ ನಿರ್ಲಕ್ಷ್ಯ ಮಾಡಿದ್ದು ಜನರಿಗೆ ಪಶ್ಚಾತಾಪವಾಗಿ ಅಭಿವೃದ್ಧಿ ಪರ ಕೆಲಸ ಮಾಡುವ ನನನ್ನು ಗೆಲ್ಲಿಸಲು ಮನಸು ಮಾಡಿದ್ದಾರೆ ಇಡಿ ನಮ್ಮ ಕುಟುಂಬ ಇಡಿ ಕ್ಷೇತ್ರದ್ಯಾಂತ ತಿರುಗಾಡಿ ಪ್ರತಿಯೊಬ್ಬ ಮತದಾರರನ್ನು ಭೇಟಿ ಮಾಡಿ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ ನಾನು ಜಾತಿ ರಾಜಕೀಯ ಮಾಡದೆ ಎಲ್ಲ ವರ್ಗದ ಜನರನ್ನು ವಿಶ್ವಾಸ ಕ್ಕೆ ತೆಗೆದುಕೊಂಡು ಕೈಮುಗಿದು ಬೇಡಿಕೊಳ್ಳುತ್ತಿದ್ಧು ನಾನು ಹೊದ ಕಡೆ ಜನ ಅಭೂತಪೂರ್ವ ಬೆಂಬಲ ನೀಡುವ ಮೂಲಕ ಸ್ವಾಗತ ನೀಡುವುದು ನೋಡಿದರೆ ಈ ಸಲ ಚುನಾವಣೆಯಲ್ಲಿ ನಾನು ಗೆಲ್ಲುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.