ಮೇ.೨: ಮಾನ್ವಿಗೆ ಕುಮಾರಸ್ವಾಮಿ

ಮಾನ್ವಿ,ಏ.೩೦- ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ತಾಲೂಕಿಗೆ ನಮ್ಮ ಪಕ್ಷದ ವರಿಷ್ಠ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆಗಮಿಸಿ ಬಹಿರಂಗ ಪ್ರಚಾರ ಮಾಡಲಿದ್ದಾರೆ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಆಗಮಿಸಬೇಕು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಪಟ್ಟಣದ ನೂತನ ಜೆಡಿಎಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ನಮ್ಮ ಐದು ವರ್ಷದ ಅವಧಿಯ ತಾಲ್ಲೂಕಿನಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಇದನ್ನು ಗಮನಿಸುತ್ತಿರುವ ಕ್ಷೇತ್ರದ ಜನರು ಖಂಡಿತವಾಗಿ ನಮ್ಮ ಪಕ್ಷಕ್ಕೆ ಬೆಂಬಲಿಸುತ್ತಾರೆ ಎಂದರು ನಂತರ ಮಂಗಳವಾರ ಮುಂಜಾನೆ ಹನ್ನೊಂದು ಘಂಟೆಗೆ ಪಟ್ಟಣದ ಟಿಎಪಿಎಂಎಸ್ ಆವರಣದಲ್ಲಿ ಬಹಿರಂಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ಪುರಸಭೆ ಸದಸ್ಯರಾದ ತನ್ವೀರ್ ಉಲ್ಲ್ ಹಸನ್, ಶರಣಪ್ಪ ಮೇದಾ, ಶಿವರಾಜ ನಾಯಕ, ದೇವರಾಜ, ರವಿ ಪಿ, ಶ್ರೀಧರ ಸ್ವಾಮಿ, ಬಾಷ ಸಾಬ್, ಖಲೀಲ್ ಖುರೇಷಿ, ಮೌಲಸಾಬ್, ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.