ಮೇ ೨ ನೂತನ ಸಿಬಿಐ ನಿರ್ದೇಶಕರ ಆಯ್ಕೆ

ನವದೆಹಲಿ,ಏ.೬- ನೂತನ ಸಿಬಿಐ ನಿರ್ದೇಶಕರ ಆಯ್ಕೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಉನ್ನತ ಮಟ್ಟದ ಸಭೆ ಮೇ ೨ ರಂದು ನಡೆಯಲಿದೆ. ಈ ಕುರಿತು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಮಾಹಿತಿ ರವಾನಿಸಿದೆ.
ಈ ಸಭೆಯಲ್ಲಿ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಲೋಕಸಭೆಯಲ್ಲಿನ ಪ್ರತಿಪಕ್ಷ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಫೆ. ೨ರಂದೇ ಸಿಬಿಐ ನಿರ್ದೇಶಕರಾಗಿದ್ದ ಆರ್.ಕೆ ಶುಕ್ಲಾ ನಿವೃತ್ತಿ ಹೊಂದಿದ್ದು, ಪ್ರವೀಣ್ ಸಿನ್ಹಾ ಅವರನ್ನು ಉಸ್ತುವಾರಿ ಸಿಬಿಐ ನಿರ್ದೇಶಕರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.
ಈ ಮಧ್ಯೆ ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡುವ ಸಂಬಂಧ ಮುಂದೆ ನಡೆಯುವ ಸಭೆಯಲ್ಲಿ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದ ಎಸ್.ಎ ಬೋಬ್ಡೆ ಈ ತಿಂಗಳ ೨೩ ರಂದು ನಿವೃತ್ತಿಯಾಗಲಿದ್ದಾರೆ. ಈ ಸಭೆಗೆ ನೂತನವಾಗಿ ನೇಮಕಗೊಂಡಿರುವ ಮುಖ್ಯನ್ಯಾಯಮೂರ್ತಿ ಎನ್.ಎ ರಮಣ ಅವರನ್ನು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರದ ಪರವಾಗಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಹೇಳಿಕೆಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನೂತನ ನಿರ್ದೇಶಕರನ್ನು ಆಯ್ಕೆಗಾಗಿ ನಡೆಯಲಿರುವ ಸಭೆಯಲ್ಲಿ ನಿವೃತ್ತಿಯಾಗಲಿರುವ ಎಸ್.ಎ. ಬೋಬ್ಡೆ ಹಾಗೂ ಅವರ ಉತ್ತರಾಧಿಕಾರಿಯಾಗಲಿರುವ ರಮಣ ಅವರು ಪಾಲ್ಗೊಳ್ಳಬೇಕು. ಆದರೆ, ಸರ್ಕಾರ ಬೋಬ್ಡೆ ಅವರು ನಿವೃತ್ತಿಯಾಗುವ ನೆಪ ಮಾಡಿ ಅವರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರಿದರು.