
ದಾವಣಗೆರೆ. ಮೇ.೨೬; ಇಂಟರ್ ನ್ಯಾಷನಲ್ ಫ್ರೆಂಡ್ಸ್ ಆಫ್ ಬುದ್ದಿಸ್ಟ್ ಸೋಷಿಯಲ್ ಏಜ್ಯುಕೇಷನ್ ,ಕಲ್ಚರಲ್ ಆಂಡ್ ಚಾರಿಟಬಲ್ ಟ್ರಸ್ಟ್ ನಿಂದ ಮೇ.೨೮ ರಂದು ಬೆಳಗ್ಗೆ ೧೦.೩೦ ಕ್ಕೆ ನಗರದ ರೋಟರಿಬಾಲ ಭವನದಲ್ಲಿ ಬುದ್ದ,ಬಸವ, ಅಂಬೇಡ್ಕರ್ ಜಯಂತಿ ಹಾಗೂ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಜಿಲ್ಲಾಧ್ಯಕ್ಷ ಡಿ.ಎನ್ ಹಾಲೇಶ್ ನಲ್ಕುದುರೆ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ.೨೮ ರಂದು ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಬಂತೇಜಿ ಬಿಕ್ಕುಣಿ ಬುದ್ದಮ್ಮ ವಹಿಸಲಿದ್ದಾರೆ.ಮೈಸೂರು ಉರುಲಿಂಗಪೆದ್ದಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಉದ್ಘಾಟನೆ ನೆರವೇರಿಸಲಿದ್ದಾರೆ.ಪ್ರಸ್ತುತ ದಿನಮಾನಕ್ಕೆ ಬುದ್ದರ ತತ್ವಗಳ ಅನಿವಾರ್ಯತೆ ವಿಷಯ ಕುರಿತು ಪ್ರೊ.ಎ.ಬಿ ರಾಮಚಂದ್ರಪ್ಪ,ನಮ್ಮ ಬದುಕಿನಲ್ಲಿ ಬಸವೇಶ್ವರರ ವಚನಗಳ ಪ್ರಾಮುಖ್ಯತೆ ಬಗ್ಗೆ ಧಾರವಾಡ ಜ್ಞಾನ ಬುದ್ದ ವಿಹಾರದ ಕಾರ್ಯದರ್ಶಿ ಎಫ್.ಹೆಚ್ ಜಕ್ಕಪ್ಪನವರ್ ಉಪನ್ಯಾಸ ನೀಡಲಿದ್ದಾರೆ.ಭಾರತೀಯ ಸಮುದಾಯಕ್ಕೆ ಅಂಬೇಡ್ಕರ್ ಕೊಡುಗೆ ಕುರಿತು ಡಿ.ಟಿ ದೇವೇಂದ್ರನ್ ಹಾಗೂ ಭಾರತೀಯ ಸಂವಿಧಾನ ರಚನೆಯಲ್ಲಿ ಬುದ್ದ ತತ್ವಗಳ ಅಳವಡಿಕೆ ಕುರಿತು ಡಾ.ಜಿ.ಟಿ ಗೋವಿಂದಪ್ಪ ಉಪನ್ಯಾಸ ನೀಡುವರು ಎಂದರು.ಮುಖ್ಯ ಅತಿಥಿಗಳಾಗಿ ಎನ್.ರುದ್ರಮುನಿ,ಹೆಚ್.ಕೆ ಬಸವರಾಜ್, ಎ.ಆರ್ ಮಹಾದೇವಪ್ಪ, ಆವರಗೆರೆ ರುದ್ರಮುನಿ ಆಗಮಿಸಲಿದ್ದಾರೆಂದರು.ಇದೇ ವೇಳೆ ಪ್ರೊ.ಎ.ಬಿ ರಾಮಚಂದ್ರಪ್ಪ ಸಂಪಾದಿಸಿ ಮಾನವ ಬಂಧುತ್ವ ವೇದಿಕೆ ಪ್ರಕಾಶಿಸಿರುವ ಮಹಾ ಬೆಳಕು ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ.ನಂತರ ದಾವಣಗೆರೆ ವಿಶ್ವವಿದ್ಯಾಲಯದಿಂದ ವಿಪಶ್ಯನ ಧ್ಯಾನ ಕುರಿತು ಉಪನ್ಯಾಸ ಕಾರ್ಯಕ್ರಮ ಜರುಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಂ.ಎಸ್ ಕೃಷ್ಣ,ಹೆಚ್.ಕೆ.ಕೊಟ್ರೇಶ್,ಹನುಮಂತಯ್ಯ,ಆವರಗೆರೆ ರುದ್ರಮುನಿ,ಚಿದಾನಂದ ಉಪಸ್ಥಿತರಿದ್ದರು.