ಮೇ.೨೮ ರಂದು ಚಿರಂತನ ಉತ್ಸವ- 2023

ದಾವಣಗೆರೆ.ಮೇ.೨೬:  ಚಿರಂತನ ಸಂಸ್ಥೆಯ 21ನೇ ವರ್ಷದ ಸಾರ್ಥಕ ಸಂಭ್ರಮದ ನಿಮಿತ್ತ ಚಿರಂತನ ಉತ್ಸವ-2023  ನೃತ್ಯ ಹಾಗೂ ಸಂಗೀತ ಹಬ್ಬವನ್ನು ಮೇ 28 ರ  ಸಂಜೆ 6 ಗಂಟೆಗೆ ಬಾಪೂಜಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಚಿರಂತನ ಅಧ್ಯಕ್ಷೆ ದೀಪಾ ಎನ್.ರಾವ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿರಂತನ 21ವರ್ಷಗಳ ಸಾರ್ಥಕ ಪಯಣ ಮುಗಿಸಿದ, 22ನೇ ವರ್ಷಕ್ಕೆ ಕಾಲಿಡುತ್ತಿದ್ದು, ಸುಮಾರು 100ಕ್ಕೂ ಹೆಚ್ಚು ಕಲಾವಿದರಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಚಿರಂತನ ಕಲಾವಿದರಿಂದ ಮಹಿಷ ಮರ್ಧಿನಿ ನೃತ್ಯ ರೂಪಕ ಪ್ರಸ್ತುತ ಪಡಿಸಲಾಗುವುದು. ಹಾಗೂ ಬೆಂಗಳೂರು ಏಕ್ಯಂ ತಂಡದವರು ಶಿವೋಹಂ ನೃತ್ಯ ರೂಪಕ ನಡೆಸಿಕೊಡಲಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಕರ್ನಾಟಕ ವುಮೆನ್ ಎಕ್ಸಲೆನ್ಸ್ ಅವಾರ್ಡ್ ಕರ್ನಾಟಕ ಮಹಿಳಾ ಶ್ರೇಷ್ಠ ಸಾಧಕಿ ಪ್ರಶಸ್ತಿಯ 2023 ನೇ ಆವೃತ್ತಿ ಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.ರಾಜ್ಯದ ಸುಮಾರು 15 ಕ್ಕೂ ಹೆಚ್ಚು ವಿಶೇಷ ಮಹಿಳಾ ಸಾಧಕಿಯರನ್ನು ಗುರುತಿಸಿ ಅವರಿಗೆ ಕರ್ನಾಟಕ ವುಮೆನ್ಸ್ ಎಕ್ಸಲೆನ್ಸ್ ಅವಾರ್ಡ್ ಪ್ರಶಸ್ತಿ ನೀಡುವುದರ ಮೂಲಕ ಅವರನ್ನು ಗೌರವಿಸಲಾಗುತ್ತಿದೆ. ಸ್ಥಳೀಯ ಸಾಧಕರಾದ ಶಿಕ್ಷಣ ಕ್ಷೇತ್ರದಲ್ಲಿ ಜಸ್ಟಿನ್ ಡಿಸೋಜಾ, ಸಮಾಜ ಸೇವೆ ವಿಭಾಗದಲ್ಲಿ ಅಲಕಾನಂದ ರಾಮದಾಸ್ ಗೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಲಕ್ಷ್ಮೀ ದೇವಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜೀವಮಾನ ಸಾಧನೆ ಪ್ರಶಸ್ತಿಯನ್ನು ಕಿರುವಾಡಿ ಗಿರಿಜಮ್ಮ ಅವರಿಗೆ ಪ್ರದಾನ ಮಾಡುತ್ತಿರುವುದಾಗಿ ತಿಳಿಸಿದರು.ಚಿರಂತನ ಉತ್ಸವದ ಮುಖ್ಯ ಅತಿಥಿಗಳಾಗಿ  ಡಾ. ಶಾಮನೂರು ಶಿವಶಂಕರಪ್ಪ ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಚಲವಾದಿ,  ಖ್ಯಾತ ನೃತ್ಯ ಅಶ್ವಥ್ ಹರಿತನ್,  ಉದ್ಯಮಿ ಅಥಣಿ ವೀರಣ್ಣ ,  ಎಸ್.ಎಸ್. ಕೇರ್ ಟ್ರಸ್ಟ್ ನ ಸದಸ್ಯರು ಹಾಗೂ ಬಾಪೂಜಿ ವಿದ್ಯಾಸಂಸ್ಥೆ ಸದಸ್ಯರಾದ ಪ್ರಭಾ ಮಲ್ಲಿಕಾರ್ಜುನ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಉದ್ಯಮಿ  ಹೇಮಾ ನಿರಂಜನ್ ,  ಆಗಮಿಸುತ್ತಿದ್ದಾರೆ ಎಂದರು.ಕಾರ್ಯಕ್ರಮಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿದ್ದು,  ಕಲಾಸಕ್ತರು ಹಾಗು ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಚಿರಂತನ ಕಾರ್ಯದರ್ಶಿ ಮಾಧವ ಪದಕಿ, ಸಲಹೆಗಾರರಾದ ಅಲಕಾನಂದ ರಾಮದಾಸ್ ಹಾಗೂ ಮ್ಯಾನೇಜರ್ ವೆಂಕಟೇಶ್ ಉಪಸ್ಥಿತರಿದ್ದರು.