
ರಾಯಚೂರು,ಮೇ.೧೯- ಮ್ಯಾದಾರ್ ಲಲಿತ ಕಲಾ ಪ್ರತಿಷ್ಟಾನ ವತಿಯಿಂದ ಮೇ.೨೧ ರಂದು ಹಿರಿಯ ಚಿತ್ರಕಲಾವಿದ ಎಚ್.ಎಚ್. ಮ್ಯಾದಾರ್ ಚಿತ್ರಿಸಿದ ಡಾ.ರಾಜಕುಮಾರ ಕುರಿತು ಚುಕ್ಕಿ ಚಿತ್ರಗಳ ಪ್ರದರ್ಶನ ಹಾಗೂ ಚಿತ್ರ ಸಂಪುಟ ಅಮೂಲ್ಯ ಮುತ್ತು ಲೋಕಾರ್ಪಣೆ ಕಾರ್ಯಕ್ರಮವು ನಗರದ ಕನ್ನಡ ಭವನದಲ್ಲಿ ಬೆಳಿಗ್ಗೆ ೧೧-೩೦ ಹಮ್ಮಿಕೊಳ್ಳಲಾಗಿದೆ ಎಂದು ಮ್ಯಾದಾರ್ ಲಲಿತ ಕಲಾ ಪ್ರತಿಷ್ಟಾನ ಕಾರ್ಯದರ್ಶಿ ರಾಮಣ್ಣ ಮ್ಯಾದಾರ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,ಈ ಕಾರ್ಯಕ್ರಮವನ್ನು ಕರ್ನಾಟಕ ಲಲಿತಾ ಕಲಾ ಅಕಾಡಮಿ ಮಾಜಿ ಅಧ್ಯಕ್ಷ ಡಾ.ವಿ.ಜಿ.ಅದಾನಿ ಅವರು ಉದ್ಘಾಟಿಸಲಿದ್ದಾರೆ.ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಹಾಗೂ ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ.ಮಹೇಂದ್ರ ಅವರು ಚಿತ್ರ ಸಂಪುಟ ಲೋಕಾರ್ಪಣೆನ್ನು ಮಾಡಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ವಿರಹನುಮಾನ ಅವರು ವಹಿಸಲಿದ್ದಾರೆ.ಚಿತ್ರ ಸಂಪುಟ ಕುರಿತು ಹಿರಿಯ ಚಿತ್ರ ಕಲಾವಿದ ಪಿ. ಎ. ಬಿ.ಈಶ್ವರ್ ಮಾತನಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಂಗಣ್ಣ ಪಾಟೀಲ್ ಅಲ್ಲುಂಡಿ, ಆರ್ಟ್ ಅಫೇರ್ಸ್ ಸಂಪಾದಕ ವಿಶ್ವನಾಥ ವಿ.ಗುಗ್ಗರಿ,ಸುರಭಿ ಸಾಂಸ್ಕೃತಿಕ ಬಳಗ ಅಧ್ಯಕ್ಷ ಜಿ.ಸುರೇಶ ಅವರು ಆಗಮಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಯುವ ಲೇಖಕ ಹಾಗೂ ವ್ಯಂಗ ಚಿತ್ರಕಾರ ಈರಣ್ಣ ಬೆಂಗಾಲಿ ಉಪಸ್ಥಿತಿ ಇರುವರು.
ಈ ಸಂದರ್ಭದಲ್ಲಿ ಈರಣ್ಣ ಬೆಂಗಾಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.