ಮೇ.೨೦ ಕ್ಕೆ ವಿಶ್ವರಾಧ್ಯ ಆಸ್ಪತ್ರೆಯಲ್ಲಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ

ದಾವಣಗೆರೆ. ಮೇ.೧೮; ನಗರದ ಪಿ.ಬಿ ರಸ್ತೆಯಲ್ಲಿರುವ ವಿಶ್ವರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯಲ್ಲಿ‌ ಮೇ.೨೦ ರಂದು ಬೆಳಗ್ಗೆ ೯ ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ಕ್ಯಾನ್ಸರ್ ಸರ್ಜನ್ ಡಾ.ಜಗದೀಶ್ ತುಬಚಿ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವರಾಧ್ಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಿಮೋಥೆರಪಿ,ರೇಡಿಯೋಥೆರಪಿ,ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ನೋವು ನಿವಾರಣಾ ಕ್ಲಿನಿಕ್,ಮಹಿಳಾ ಕ್ಯಾನ್ಸರ್ ರೋಗಿಗಳಿಗೆ ವಿಶೇಷ ಕ್ಲಿನಿಕ್ ಸೌಲಭ್ಯಗಳಿದ್ದು ಉತ್ತಮ ಆರೈಕೆಯೊಂದಿಗೆ ಚಿಕಿತ್ಸೆ ನೀಡಲಾಗುವುದು ಎಂದರು.ಮೇ.೨೦ ರಂದು ನಡೆಯುವ ಶಿಬಿರದಲ್ಲಿ ಶಸ್ತ್ರಚಿಕಿತ್ಸೆ, ಕಿಮೋಥೆರಪಿ,ಆಧುನಿಕ ರೇಡಿಯೋ ಥೆರಪಿ ತಪಾಸಣೆ ಮಾಡಲಾಗುವುದು. ಶಿಬಿರದಲ್ಲಿ ಕ್ಯಾನ್ಸರ್ ಪತ್ತೆಯಾದವರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುವುದು ಎಂದರು. ಇಲ್ಲಿಯವರೆಗೆ ಆಸ್ಪತ್ರೆ ವತಿಯಿಂದ ನಾಲ್ಕು ಶಿಬಿರಗಳನ್ನು  ಮಾಡಲಾಗಿದೆ. ಪುರುಷರಲ್ಲಿ ಹೆಚ್ಚಾಗಿ ಬಾಯಿಕ್ಯಾನ್ಸರ್ ಕಂಡುಬರುತ್ತಿದೆ ಅದೇ ರೀತಿ ಮಹಿಳೆಯರಲ್ಲಿ ಗರ್ಭಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತದೆ ಪ್ರಾರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ನೀಡಿದರೆ ಕ್ಯಾನ್ಸರ್ ತಡೆಗಟ್ಟಬಹುದಾಗಿದೆ ಎಂದು ಮಾಹಿತಿ ನೀಡಿದರು.ಹೆಚ್ಚಿನ ವಿವರಗಳಿಗಾಗಿ 9742455516,9480696842 ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಡಾ.ಅಜಯ್,ಆಡಳಿತಾಧಿಕಾರಿ ರಾಘವೇಂದ್ರ, ಕೋ ಆರ್ಡಿನೇಟರ್ ವಿಶ್ವಾಸ್,ಮಂಜುನಾಥ್ ಇದ್ದರು.