ಮೇ ೧೩ಕ್ಕೆ ರಾಘವ್-ಪರಿಣಿತಿ ನಿಶ್ಚಿತಾರ್ಥ

ಮುಂಬೈ,ಮೇ.೨- ಕಳೆದ ಹಲವು ಹಲವು ವಿವಿಧ ಸಮಾರಂಭಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಎಎಪಿಯ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಮತ್ತು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಕೊನೆಗೆ ತಮ್ಮ ಡೇಟಿಂಗ್‌ಗೆ ಮದುವೆಯ ಅಧಿಕೃತ ಮುದ್ರೆ ಒತ್ತಲು ಮುಂದಾಗಿದ್ದಾರೆ.

ಈ ತಿಂಗಳ ೧೩ ರಂದು ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದು ಅಕ್ಟೋಬರ್ ತಿಂಗಳಲ್ಲಿ ಮದುವೆಯಾಗಲಿದ್ದಾರೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿದೆ.

ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಈ ಜೋಡಿ ಮಾರ್ಚ್ ತಿಂಗಳಲ್ಲಿ ಉಪರಾಷ್ಟ್ರಪತಿಯೂ ಆಗಿರುವ ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರ ಕಣ್ಣಿಗೆ ಬಿದ್ದು ಗಮನ ಸೆಳೆದಿದ್ದರು.

ಕಳೆದ ಸಂಸತ್ತಿನ ಅಧಿವೇಶನದ ಸಮಯದಲ್ಲಿ, ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯ ವಿಷಯವನ್ನು ಪ್ರಸ್ತಾಪಿಸಲು ಅವಕಾಶ ನೀಡುವಂತೆ ರಾಘವ್ ಚಡ್ಡಾ ಸಭಾಪತಿಗಳಿಗೆ ಮನವಿ ಮಾಡಿದಾಗ ಅವರು ತಮಾಷೆಯಾಗಿ ಯಾವಾಗ ಮದುವೆ ಎಂದು ಕೇಳಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಸಂಸತ್ತಿನಿಂದ ಹೊರಡುವಾಗ ವರದಿಗಾರರಿಗೆ ಪ್ರತಿಕ್ರಿಯಿಸಿದ ರಾಘವ್ ಚಡ್ಡಾ ಅವರು ನಗುತ್ತಾ ನೀವು ನನಗೆ ರಾಜಕೀಯದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತೀರಿ ಎಂದುಕೊಂಡಿದ್ದೆ.ಬಾಲಿವಡ್ ನಟಿ ಪರಿಣಿತಿ ಚೋಪ್ರಾ ವಿಷಯ ಎಂದು ಭಾವಿಸಿರಲಿಲ್ಲ ಎಂದಿದ್ದರು,

ನಟಿ ಪರಿಣಿತಿ ಅವರೊಂದಿಗಿನ ವದಂತಿಗಳ ಬಗ್ಗೆ ಕೇಳಿದಾಗ ಏನನ್ನೂ ಹೇಳಲು ರಾಘವ್ ಚಡ್ಡಾ ನಿರಾಕರಿದ್ದರು, ಪರಿಣಿತಿ ಲಂಡನ್‌ನ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಯಾಗಿದ್ದು, ಚಾಧಾ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಓದಿದ್ದಾರೆ.