ಮೇ.೧೨ಕ್ಕೆ ಛಲವಾದಿ ವಧು-ವರರ ಸಮಾವೇಶ 

ಸಂಜೆವಾಣಿ ವಾರ್ತೆ

ದಾವಣಗೆರೆ.ಮೇ.೯: ಛಲವಾದಿ ಮಹಾಸಭಾ ವತಿಯಿಂದ ‘ಛಲವಾದಿ ವಧು-ವರರ ಸಮಾವೇಶವನ್ನು ದಾವಣಗೆರೆಯ ಜಯನಗರ ಹೈಟೆಕ್ ಆಸ್ಪತ್ರೆ ಭಗೀರಥ ವೃತ್ತದಲ್ಲಿರುವ ಹೆಚ್.ಬಿ. ಇಂದಿರಮ್ಮ ರಾಮಯ್ಯ ಫಂಕ್ಷನ್ ಹಾಲ್ ನಲ್ಲಿ ಮೇ 12 ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ  ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಸಂಚಾಲಕ ಎಲ್. ಪಂಚಾಕ್ಷರಯ್ಯ ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶವನ್ನು ಛಲವಾದಿ ಮಹಾಸಭಾ ಅಧ್ಯಕ್ಷ ಎನ್. ರುದ್ರಮುನಿ, ಕಾರ್ಯಧ್ಯಕ್ಷ ಟಿ.ಎಸ್. ರಾಮಯ್ಯ ಹಾಗೂ ಪದಾಧಿಕಾರಿಗಳ ಸಹಯೋಗದೊಂದಿಗೆ ಹಾಗೂ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು,  ನಾಯಕನಹಟ್ಟಿ ಹಾಗೂ ಹಿರಿಯೂರು ಛಲವಾದಿ ಬಂಧುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.ವಧು-ವರರ ಸಮಾವೇಶಕ್ಕೆ ಎಲ್ಲೆಡೆಯಿಂದ 500 ಕ್ಕೂ ಹೆಚ್ಚು ವಧು-ವರರು ಆಗಮಿಸುವ ನಿರೀಕ್ಷೆ ಇದ್ದು,  ಛಲವಾದಿ ಬಂಧುಗಳು ಸಮಾವೇಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು. ಪಾಲ್ಗೊಳ್ಳುವ ವಧುವರರು ತಮ್ಮ ಭಾವಚಿತ್ರದೊಂದಿಗೆ ಆಗಮಿಸಲು ತಿಳಿಸಿದ್ದಾರೆ. ನೋಂದಣಿ ಶುಲ್ಕ 300 ರೂ. ನಿಗದಿಪಡಿಸಲಾಗಿದ್ದು, ಮಧ್ಯಾಹ್ನ ಲಘು ಉಪಹಾರ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.ಹೆಚ್ಚಿನ ಮಾಹಿತಿಗೆ ಸಂಚಾಲಕರು,ಎಲ್. ಪಂಚಾಕ್ಷರಯ್ಯ, ಮೊ : 9740351839, ಬಿ.ಹೆಚ್. ಶೇಖರಪ್ಪ, ಮಂಜುನಾಥ್, ಮೊ: 9448477589, ಉಮೇಶ್, ಮೊ: 8431838699, ಎಲ್‌. ನಾಗರಾಜು, ಮೊ: 9448131787 ಸಂಪರ್ಕಿಸಲು ತಿಳಿಸಿದರು.ಮಹಾಸಭಾದ ಅಧ್ಯಕ್ಷ ಎನ್. ರುದ್ರಮುನಿ ಮಾತನಾಡಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ಯಾವುದೇ ಗೊಂದಲವಿಲ್ಲದೆ, ಸುಸೂತ್ರವಾಗಿ ನಡೆಯಲು ಕಾರಣರಾದ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಲು ಶ್ರಮಿಸಿದ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ, ಸಮಾಜದ ಮುಖಂಡರಾದ ಎಸ್. ಶೇಖರಪ್ಪ, ಹೆಚ್. ತಿಪ್ಪೇಸ್ವಾಮಿ, ಎಲ್. ಪಂಚಾಕ್ಷರಯ್ಯ, ಎ.ಡಿ. ರೇವಣಸಿದ್ದಪ್ಪ ಇನ್ನಿತರರು ಉಪಸ್ಥಿತರಿದ್ದರು.