ಮೇ.೧೦ ರವರೆಗೆ ಲಸಿಕೆ ಹಾಕುವುದಿಲ್ಲ; ಜಿಲ್ಲಾಧಿಕಾರಿ

ದಾವಣಗೆರೆ.ಮೇ.೨: ಜಿಲ್ಲೆಯಲ್ಲಿ18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆಯ ಆನ್ ಲೈನ್ ನಲ್ಲಿ ನೋಂದಣಿ ನಡೆಯುತ್ತಿದೆ. ಲಸಿಕೆ ಪೂರೈಕೆಯಾಗದ ಹಿನ್ನೆಲೆ  ಜಿಲ್ಲೆಯಲ್ಲಿ ಮೇ .10 ವರೆಗೆ ಲಸಿಕೆ ಸಿಗುವುದು ಅನುಮಾನ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಮೇ 10 ಬಳಿಕವೇ ಜಿಲ್ಲೆಯಲ್ಲಿ  18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಲಭ್ಯವಾಗಲಿದೆ.  ಇನ್ನು 45 ವರ್ಷ ಮೇಲ್ಪಟ್ಟವರಿಗೆ 8 ಸಾವಿರ ಲಸಿಕೆ ಬಂದಿತ್ತು. ಕಳೆದ ಎರಡು ದಿನದ ಹಿಂದೆ 7 ಸಾವಿರ ಲಸಿಕೆ ಹಾಕಲಾಗಿದೆ. ಉಳಿದು ಒಂದು ಸಾವಿರ ಲಸಿಕೆಯನ್ನು ಇಂದು ಹಾಕಲಾಗಿದೆ. ಎರಡನೇ ಅಲೆ ಬರುವುದಕ್ಕಿಂತ ಮುನ್ನ ಜನರನ್ನು ಕೊರೊನಾ ಲಸಿಕೆ ಹಾಕಿಸಿಕೊಳ್ಳಿ ಎಂದು ಕೈ ಮುಗಿದು ಮನವಿ ಮಾಡಿದ ಜನರು ಬಂದಿಲ್ಲ.ಈಗ ಒಮ್ಮೆಲೇ ಜನರು ಭಯಗೊಂಡು ಲಸಿಕೆ ಹಾಕಿಸಿಕೊಳ್ಳಲು ನೋಂದಣೆ ಮಾಡಿದ್ದರಿಂದ ಅಗತ್ಯಕ್ಕೆ ತಕ್ಕಷ್ಟು ಪೂರೈಕೆ ಆಗುತ್ತಿಲ್ಲ ಎಂದರು.ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ. 6 ಸಾವಿರ ಲೀಟರ್ ಆಕ್ಸಿಜನ್ ಜಿಲ್ಲೆಯಲ್ಲಿದ್ದು, ಯಾವುದೇ ಸಮಸ್ಯೆ ಇಲ್ಲ. ಇನ್ನು ರೆಮ್ ಡಿಸಿವಿರ್ ಲಸಿಕೆ ಸಹ ಜಿಲ್ಲೆಯಲ್ಲಿ 2 ಸಾವಿರಕ್ಕಿಂದ ಹೆಚ್ಚಿನ ಪ್ರಮಾಣದಲ್ಲಿದೆ. ನಿನ್ನೆ 490 ರೆಮ್ ಡಿಸಿವಿರ್ ಲಸಿಕೆ ಬಂದಿದೆ. ಅವಶ್ಯಕತೆ ಇದ್ದವರಿಗೆ ಮಾತ್ರ ಈ ಲಸಿಕೆ ಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದರು.