ಮೇ ೦೫: ಅಮಿತ್ ಶಾ ಆಗಮನ, ಸ್ಥಳ ಪರಿಶೀಲನೆ

ರಾಯಚೂರು,ಏ.೩೦- ಮೇ.೫ ರಂದು ರಾಯಚೂರು ಗ್ರಾಮೀಣ ಕ್ಷೇತ್ರದ ಚಂದ್ರಬಂಡಾ ಗ್ರಾಮದಲ್ಲಿ ಏಪರ್ಡಿಸಿರುವ ಬಹಿರಂಗ ಸಭೆಗೆ ಕೇಂದ್ರ ಗೃಹ ಸಚುವರಿ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರು ಆಗಮಿಸಲಿದ್ದಾರೆ. ವೇದಿಕೆ ಸಿದ್ದತೆಯನ್ನು ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಲ್ದಾರ ಅವರು ಪರಿಶೀಲನೆ ನಡೆಸಿದರು.
ಅಮೀತ್ ಶಾ ಅವರು ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗಿದ್ದು, ಅವರನ್ನು ಸ್ವಾಗತಿಸಲು ಸರ್ವ ಸಿದ್ದತೆಯನ್ನು ಕೈಗೊಳ್ಳಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಲ್ದಾರ ಹೇಳಿದರು.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ಶಂಕರಗೌಡ ಮಿರ್ಜಾಪುರ, ಎಪಿಎಂಸಿ ಅಧ್ಯಕ್ಷರಾದ ಅಚ್ಯುತ್ ರೆಡ್ಡಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಎನ್.ಕೇಶವ್ ರೆಡ್ಡಿ, ಮಾಹದೇವ, ಮಹೇಶ ನಾಯಕ, ಹುಲಿಗೇಪ್ಪ ವಕೀಲರು, ದಸ್ತಗೀರ ನಾಯಕ, ರಾಘವರೆಡ್ಡಿ, ತಿರುಮಲಗೌಡ, ಗೋಪಾಲ ಸೇರಿದಂತೆ ಮುಖಂಡರು, ಪ್ರಮುಖರು ಹಾಜರಿದ್ದರು.