ಮೇ ಹಾಗೂ ಜೂನ್ ಎರಡು ತಿಂಗಳು ಉಚಿತ 5 ಕೆಜಿ ಹೆಚ್ಚುವರಿ ಅಕ್ಕಿ ವಿತರಣೆ

ವಿಜಯಪುರ, ಮೇ.16-ಕೋವಿಡ್- 19 ವಿಪತ್ತು ಸಂದರ್ಭದಲ್ಲಿ ಕೇಂದ್ರ ಸರ್ಕಾರವು 2021 ನೇ ಮೇ ಹಾಗೂ ಜೂನ್ ತಿಂಗಳಿಗೆ ಅಂತ್ಯೋದಯ ಅನ್ನ ಯೋಜನೆ (ಎಎವೈ ) ಮತ್ತು ಬಿಪಿಎಲ್ ಪಡಿತರ ಚೀಟಿನ್ನು ಹೊಂದಿರುವ ಪ್ರತಿ ಸದಸ್ಯರಿಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡಲು ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು ತಿಳಿಸಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ ಎಎವೈ 41100. ಹಾಗೂ ಬಿಪಿಎಲ್ 462018 ಪಡಿತರ ಚೀಟಿಗಳಿದ್ದು ಅಲ್ಲದೆ ಹೊಸದಾಗಿ ಸಲ್ಲಿಸಿದ ಬಿಪಿಎಲ್ ಪಡಿತರ ಚೀಟಿ ಪ್ರತಿ ಅರ್ಜಿದಾರರಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುವುದು.
ಹೊಸದಾಗಿ ಸಲ್ಲಿಸಿದ ಅರ್ಜಿ ಗಳಲ್ಲಿನ ಸದಸ್ಯರ ಹೆಸರು ಬೇರೆ ಯಾವುದೇ ಪಡಿತರ ಚೀಟಿಯಲ್ಲಿ ಇಲ್ಲದವರಿಗೆ ಮಾತ್ರ ಪಡಿತರವನ್ನು ನೀಡಲಾಗುತ್ತದೆ. ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆ ಮತ್ತು ಹೊಸದಾಗಿ ಪಡಿತರ ಚೀಟಿಗಾಗಿ ಸಲ್ಲಿಸಿದ ಅರ್ಜಿ ಸಂಖ್ಯೆಯನ್ನು ನ್ಯಾಯಬೆಲೆ ಅಂಗಡಿಗೆ ಒದಗಿಸಿ ಪಡೆಯಬಹುದಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.