ಮೇ ತಿಂಗಳಲ್ಲಿ 1.02 ಲಕ್ಷ ಕೋಟಿ ಜಿಎಸ್ ಟಿ ಸಂಗ್ರಹ

ನವದೆಹಲಿ, ಜೂ.5- ದೇಶದಲ್ಲಿ ಮೇ ತಿಂಗಳಲ್ಲಿ ಬರೋಬ್ಬರಿ 1,02,709 ಕೋಟಿ ಸರಕು ಸೇವಾ ತೆರಿಗೆ- ಜಿಎಸ್ ಟಿ ಸಂಗ್ರಹವಾಗಿದೆ.

ಈ ಪೈಕಿ ಸಿಜಿಎಸ್ ಟಿ 17,592 ಕೋಟಿ ರೂಪಾಯಿ, ಎಸ್ ಎಸ್ ಎಸ್ ಟಿ 22,653 ,ಕೋಟಿ, ಐಜಿಎಸ್ ಟಿ 53,199 ಕೋಟಿ ರೂಪಾಯಿ ಸೇರಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸರಕು ಸೇವೆ ತೆರಿಗೆ ಪಾವತಿ ಮಾಡಲು ಕಾಲಾವಕಾಶ ತೆರಿಗೆದಾರರಿಗೆ ನೀಡಲಾಗಿತ್ತು.ಈ ನಡುವೆ ಒಂದು ಲಕ್ಷ ಕೋಟಿಗೂ ಅಧಿಕ ಜಿಎಸ್ಟಿ ಸಂಗ್ರಹವಾಗಿದೆ.

ಇದೇ ವೇಳೆ ದೇಶೀಯ ಸರಕು ಸೇವೆಗಳ ಮೇಲಿನ ತೆರಿಗೆ ಸಂಗ್ರಹದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇಕಡ 50ರಷ್ಟು ಹೆಚ್ಚಳ ಹಾಗೂ ಆದಾಯದಲ್ಲಿ 69ರಷ್ಟು ಲಕ್ಷಣವಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ

ಶೇ 65 ರಷ್ಟು ಅಧಿಕ:

ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಶೇಕಡಾ 65 ರಷ್ಟು ಸರಕು ಸೇವಾ ತೆರಿಗೆ ಹೆಚ್ಚಳ ಕಂಡಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ

ರಾಜ್ಯಗಳಿಗೆ ಪಾವತಿ:

ಈ ನಡುವೆ ಕೇಂದ್ರ ಸರ್ಕಾರ 15,014 ಕೋಟಿ ರೂಪಾಯಿ ಸಿಜಿಎಸ್ ಟಿ, 11,653 ಕೋಟಿ ರೂಪಾಯಿಯನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ

ದಾಖಲೆ ಜಿಎಸ್ ಟಿ ಸಂಗ್ರಹ

ದೇಶದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿತ‌ಕಂಡಿತ್ತು.

ಸತತ ಎಂಟು ತಿಂಗಳಿನಿಂದ ದೇಶದಲ್ಲಿ ಒಂದು ಲಕ್ಷ ಕೋಟಿಗೂ ಅಧಿಕ ಪ್ರಮಾಣದಲ್ಲಿ ಸರಕು ಮತ್ತು ಸೇವೆ ತೆರಿಗೆ ಸಂಗ್ರಹವಾಗುತ್ತದೆ ಇದು ಆಶಾದಾಯಕ ಬೆಳವಣಿಗೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಮುಂದಿನ ದಿನಗಳಲ್ಲಿ ಸರಕು ಮತ್ತು ಸೇವಾ ತೆರಿಗೆ ಪ್ರಮಾಣ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ತೆರಿಗೆ ಸಂಗ್ರಹವಾಗಿರುವ ಹಣದಲ್ಲಿ ರಾಜ್ಯಗಳಿಗೆ ಸಾಲದ ರೂಪದಲ್ಲಿ ಹಣ ಪಾವತಿ ಮಾಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ