ಮೇಹಕರ ಗ್ರಾಮದಲ್ಲಿ ತಾಲ್ಲೂಕು ಬಿಜೆಪಿ ಕಾರ್ಯಕಾರಣಿ ಸಭೆ

ಭಾಲ್ಕಿ:ನ.23: ತಾಲ್ಲೂಕಿನ ಮೇಹಕರ ಗ್ರಾಮದಲ್ಲಿ ತಾಲ್ಲೂಕು ಬಿಜೆಪಿ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕರಾದ ಪ್ರಕಾಶ ಖಂಡ್ರೆಯವರು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೋಮ್ಮಯಿ ಅವರ ನೇತೃತ್ವದಲ್ಲಿ ಸಾಕಷ್ಟು ಸಾಧನೆಗಳನ್ನು ಬಿಜೆಪಿ ಸರ್ಕಾರ ಮಾಡಿದ್ದು ಈ ಸಾಧನೆಯನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ಕರೆ ನೀಡಿದರು. ಅಷ್ಟೇ ಅಲ್ಲಾ ಇವತ್ತು ಕೇಂದ್ರ ಮತ್ತು ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಎಲ್ಲಾ ರಂಗದಲ್ಲಿ ಯಶಸ್ವಿ ದಾರಿಯಲ್ಲಿ ಕಾರ್ಯಗಳನ್ನು ಮಾಡುತ್ತಿದ್ದು.ಒಳ್ಳೆಯ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ನಾವುಗಳು ಈ ಯೋಜನೆಗಳ ಬಗ್ಗೆ ಜನರಿಗೆ ತಿಳಿಹೇಳದಿದ್ದಲಿ ನಮ್ಮಷ್ಟಕೆ ನಾವು ವಂಚನೆ ಮಾಡಿಕೊಂಡ ಹಾಗೆ ಆಗುತ್ತದೆ ಎಂದು ಪ್ರಕಾಶ ಖಂಡ್ರೆಯವರು ನುಡಿದರು.ಭಾಲ್ಕಿಯಲ್ಲಿ ನಡೆದ ಮನೆ ಹಗರಣದಲ್ಲಿ ಈಶ್ವರ ಖಂಡ್ರೆಯವರು “ಉಲ್ಟಾ ಚೋರ ಕೋತ್ವಾಲ ಕೊ ಡಾಟೆ” ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ.ಅವರಿಗೆ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಎಲ್ಲರೂ ಒಗ್ಗಟ್ಟಾಗಿ ಸೇರಿ ಕಳಿಸಲಾಗುವದು ಎಂದು ಶ್ರೀ ಪ್ರಕಾಶ ಖಂಡ್ರೆಯವರು ನುಡಿದರು. ಇದೆ ಸಂದರ್ಭದಲ್ಲಿ ಮಾತನಾಡಿದ ಭಾಲ್ಕಿ ಕ್ಷೇತ್ರದ ನಾಯಕರಾದ ಡಿ ಕೆ ಸಿದ್ರಾಮ ಅವರು ಮಾತನಾಡಿ ನರೇಂದ್ರ ಮೋದಿಯವರು ವಿಶ್ವ ಮೇಚ್ಚಿದ ನಾಯಕರಾಗಿದ್ದು ನೇತೃತ್ವದ ಭಾರತೀಯ ಜನತಾ ಪಕ್ಷದಲ್ಲಿ ನಾವುಗಳು ಸದಸ್ಯರಾಗಿರುವದು ನಮಗೆ ಗೌರವ ಆಗಿದೆ .ಇವತ್ತು ನಾವು ದೇಶದ ರಕ್ಷಣೆಗಾಗಿ ಯಾವುದೇ ಪ್ರಾಣ ತ್ಯಾಗ ಬಲಿದಾನ ಮಾಡುವ ಅವಶ್ಯಕತೆಗಳಿಲ್ಲ ಡಾ.ಬಾಬಾ ಸಾಹೆಬ ಅಂಬೇಡ್ಕರ್ ಅವರು ನಮಗೆ ನೀಡಿರುವಂತಹ ಅಧಿಕಾರವನ್ನು ಬಳಕೆ ಮಾಡಿಕೊಂಡು ನಮ್ಮ ಮತವನ್ನು ಸರಿಯಾದ ನಿಟ್ಟಿನಲ್ಲಿ ಚಲಾಯಿಸುವ ಮೂಲಕ ಈ ದೇಶವನ್ನು ಸುರಕ್ಷಿತವಾಗಿಡಲು ನಾವುಗಳು ಪಣ ತೋಡಬಹುದು ಎಂದು ಈ ಸಂದರ್ಭದಲ್ಲಿ ನುಡಿದರು.ಭಾಲ್ಕಿ ಕ್ಷೇತ್ರದಲ್ಲಿ ಈಶ್ವರ ಖಂಡ್ರೆಯವರು ಭಾರತೀಯ ಜನತಾ ಪಕ್ಷ ಮಾಡಿರುವ ಸಾಧನೆಗಳನ್ನು ತಾನು ಮಾಡಿದ್ದೆನೆ ಎಂದು ಸುಳ್ಳು ಹೇಳುತ್ತಾ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ.ವಿಶೇಷವಾಗಿ ಸಾಯಗಾಂವ ಕ್ಷೇತ್ರದಲ್ಲಿ ನಡೆದಿರುವಂತಹ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಬಿಜೆಪಿ ಸರ್ಕಾರದಲ್ಲಿ ನಡೆದಿದ್ದು .ಸಾಯಗಾಂವ ಕ್ಷೇತ್ರದ ಹದಿನಾರು ಹಳ್ಳಿಗಳು ಹೂಲಸೂರು ತಾಲೂಕಿಗೆ ಸೇರಿಸುವ ಕೇಲಸವು ಕೂಡ ಬಿಜೆಪಿ ಸರ್ಕಾರದಿಂದ ನಡೆದಿದ್ದು.ಆದರೆ ಈಶ್ವರ ಖಂಡ್ರೆಯವರು ಈ ಎಲ್ಲವು ಕೆಲಸಗಳು ತಾವೆ ಮಾಡಿದ್ದೆನೆ.ಎಂಬ ಸುಳ್ಳು ಹೇಳಿಕೆ ನೀಡುವ ಮೂಲಕ ಅವರು ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ.ಜನ ಜಾಗೃತರಾಗಿ ಇರಬೇಕು ಎಂದು ಶ್ರೀ ಡಿ ಕೆ ಸಿದ್ರಾಮ ಅವರು ಕರೆ ನೀಡಿದರು. ಅಷ್ಟೇ ಅಲ್ಲ ಭಾಲ್ಕಿ ವಸತಿ ಹಗರಣ ಇಡಿ ದೇಶದಲ್ಲಿವೆ ಚರ್ಚೆಗೆ ಒಳಗಾಗಿದ್ದು ಈ ಬಗ್ಗೆ ಲೊಕಾಯುಕ್ತ ಮತ್ತು ಸುಪ್ರೀಂ ಕೊರ್ಟನಲ್ಲಿ ಕೇಸ ನಡೆಯುತಿದ್ದು.ಇಂತಹ ಒಂದು ಸಂದರ್ಭದಲ್ಲಿ ಈಶ್ವರ ಖಂಡ್ರೆಯವರು ತಮ್ಮ ಕಾರ್ಯಕರ್ತರಿಗೆ ಶ್ರೀಮಂತ ಜನರಿಗೆ ಮನೆಗಳನ್ನು ನೀಡಿ ಬಡವರಿಗೆ ವಂಚಿಸಿದ್ದು.ಈಗ ಬಡವರ ಪರವಾಗಿ ವ್ಯರ್ಥ ಹೋರಾಟ ಮಾಡುವ ನಾಟಕ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಅರ್ಥ ವಿಲ್ಲ ಜನ ಇದನ್ನು ಅರ್ಥ ಮಾಡಿಕೊಳ್ಳ ಬೇಕು ಎಂದು ಶ್ರೀ ಡಿ ಕೆ ಸಿದ್ರಾಮ ಅವರು ತಿಳಿಸಿದರು. ಬಿಜೆಪಿ ಸರ್ಕಾರದಿಂದ ಜನರ ಮನೆಗಳ ಬಿಲ್ಲು ತಡೆಯುವ ಕೇಲಸ ನಡೆದಿಲ್ಲ.ಈಶ್ವರ ಖಂಡ್ರೆಯವರು 2018 ವಿಧಾನಸಭೆ ಚುನಾವಣೆ ಗೆಲ್ಲುವ ಕಾರಣಕ್ಕಾಗಿ ಎಲ್ಲರಿಗೂ ಮನೆಗೆ ಕರೆದು ಕುಂಕುಮವಿಟ್ಟು ನಿಮಗೆ ಒಂದು ಲಕ್ಷ ಎಂಬತ್ತು ಸಾವಿರ ಮನೆ ಮಂಜೂರಾತಿ ಮಾಡಿದ್ದೆನೆ.ಎಂದು ಹೇಳಿ ಸುಳ್ಳು ಹೇಳಿದರ ಪರಿಣಾಮವಾಗಿ ಇವತ್ತು ಜನ ಸಂಕಷ್ಟಕ್ಕೆ ಒಳಗಾಗಿದಾರೆ.ಈಶ್ವರ ಖಂಡ್ರೆಯವರು ನಮಗೆ ಕೇಳುತ್ತಾ ಇದ್ದಾರೆ ನಮ್ಮ ಮನೆ ಎಲ್ಲಿ ಇದೆ ಅಂತ ಹೇಳಿ ಜನ ಅವರಿಗೆ ಕೇಳಬೇಕು ನಮ್ಮ ಮನೆ ಈಶ್ವರ ಖಂಡ್ರೆಯವರು ಮನೆಯಲ್ಲಿದ್ದೆ ಎಂತಹ ಹೇಳಿ ಯಾಕೆಂದರೆ ಈಶ್ವರ ಖಂಡ್ರೆಯವರು ಅವರ ಮನೆಯಲ್ಲಿ ಸರ್ಕಾರ ಮಾಡುವಂತಹವ ಕೆಲಸ ಅವರ ಮನೆಯಲ್ಲಿ ಕಂಪ್ಯೂಟರ್ ಇಟ್ಟು ಹಕ್ಕುಪತ್ರ ನೀಡಿ ಜನರಿಗೆ ಮೊಸ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನಾವು ಕೂಡ ಯಾವ ಬಡ ಜನರಿಗೆ ಮನೆ ಸಿಕ್ಕಿಲ್ಲ ಅಂತಹ ಜನರನ್ನು ಸೇರಿಸಿಕೊಂಡು ನಮಗೂ ಮನೆ ಕೋಡಿ ಎನ್ನುವ ಹೋರಾಟವನ್ನು ತಾಲ್ಲೂಕಿನಲ್ಲಿ ಮಾಡಲಾಗುವುದು ಎಂದು ಶ್ರೀ ಡಿ ಕೆ ಸಿದ್ರಾಮ ಅವರು ನುಡಿದರು .ಅಷ್ಟೇ ಅಲ್ಲಾ ಈಶ್ವರ ಖಂಡ್ರೆಯವರು ಮನೆಗಳ ಅವ್ಯವಹಾರ ತಾನೆ ಮಾಡಿ ಬಿಜೆಪಿ ಪಕ್ಷದ ಸರ್ಕಾರದ ಮೇಲೆ ಕೇಸರು ಚೆಲ್ಲುವ ಕೆಲಸ ಮಾಡುತ್ತಿದ್ದಾರೆ .ಇದೆ ವಿಷಯವನ್ನು ಇಟ್ಟುಕೊಂಡು ಪ್ರತಿ ಹಳ್ಳಿ ಹಳ್ಳಿ ಗೆ ಪಾದಯಾತ್ರೆ ಮಾಡಲಾಗುವುದು ಎಂದು ಶ್ರೀ ಡಿ ಕೆ ಸಿದ್ರಾಮ ತಿಳಿಸಿದರು. ಈ ಸಂದರ್ಭದಲ್ಲಿ ಶಿವರಾಜ ಗಂದಗೆ ತಾಲ್ಲೂಕು ಅಧ್ಯಕ್ಷ ಶ್ರೀ ಪಂಡಿತ ಶಿರೋಳೆ,ಸುರೇಶ್ ಬಿರಾದರ,ಮಲ್ಲಿಕಾರ್ಜುನ ಕುಂಬಾರ, ಜಗನಾಥ ಪಾಟೀಲ, ಸೂರ್ಯಕಾಂತ ಧೋನಿ ಸುರಜಸಿಂಗ ರಜಪೂತ ಪ್ರತಾಪ ಪಾಟೀಲ ದಿಂಗಬರ ಮಾನಕರಿ ಬಾಬುರಾವ ಕಾರಬಾರಿ ಸೇರಿದಂತೆ ಅನೇಕರು ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.