ಮೇಲ್ಸೇತುವೆ ದುರಸ್ತಿ ಪಡಿಸದಿದ್ದರೆ ಉಗ್ರ ಹೋರಾಟ

ಲಕ್ಷ್ಮೇಶ್ವರ, ಜೂ 7 : ಲಕ್ಷ್ಮೇಶ್ವರ ಮಂಗಸೂಳಿ ರಾಜ್ಯ ಹೆದ್ದಾರಿಯ ಲಕ್ಷ್ಮೇಶ್ವರ ಹುಬ್ಬಳ್ಳಿ ಮಧ್ಯದ ರಸ್ತೆಯನ್ನು 270 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ರಸ್ತೆಯ ಮಧ್ಯದಲ್ಲಿ ಶಿರೂರು ಸಮೀಪ ಮೇಲ್ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದರೆ ಕಳೆದ ಎರಡು ತಿಂಗಳಿನಿಂದ ಮೇಲ್ಸೇತುವೆ ಶಿಥಿಲಗೊಂಡ ರಸ್ತೆಯೇ ಅನಾಥವಾಗಿದೆ. ವಾಹನ ಸಂಚಾರ ಸಂಪೂರ್ಣ ನಿರ್ಭಂಧವಾಗಿದೆ. ಇಷ್ಟು ವೆಚ್ಚದಲ್ಲಿ ಮಾಡಲಾಗಿದ್ದ ರಸ್ತೆಯೊಂದು ಮೇಲ್ಸೇತುವೆಯ ಶಿಥಲೀಕರಣವಾಗಿದ್ದರೂ, ಸಚಿವರು ಕೇಂದ್ರ ಸಚಿವರು, ಶಾಸಕರು ಯಾರೊಬ್ಬರೂ ತಲೆಕೆಡಿಸಿಕೊಳ್ಳದೆ ಇರುವುದು ದುರ್ದೈವ ಸಂಗತಿ ಎಂದು ಗದಗ ಜಿಲ್ಲಾ ಪಂಚಾಯಿತ್ ಮಾಜಿ ಅಧ್ಯಕ್ಷ ಹಾಗೂ ಜಿಪಂ ಸದಸ್ಯ ಎಸ್.ಪಿ ಬಳಿಗಾರ್ ಹೇಳಿದ್ದಾರೆ.
ಅವರು ಹೇಳಿಕೆಯೊಂದು ನೀಡಿ, ರಾಜ್ಯ ಹೆದ್ದಾರಿ 73ರ ಈ ರಸ್ತೆಯ ಲಕ್ಷ್ಮೇಶ್ವರ ಹುಬ್ಬಳ್ಳಿ ಕೊಂಡಿಯಾಗಿದ್ದ ಶಿರೂರಿನ ಮೇಲ್ಸೇತುವೆಯನ್ನು ದುರಸ್ತಿ ಮಾಡದಿದ್ದರೆ ನಾಲ್ಕೈದು ತಾಲೂಕುಗಳ ಜನರು ಹುಬ್ಬಳ್ಳಿ ಸಂಪರ್ಕಿಸಲು ಹರಸಾಹಸ ಪಡಬೇಕಾಗಿದೆ. ಆದ್ದರಿಂದ ಸಂಬಂಧಪಟ್ಟ ಕೇಂದ್ರ ಸಚಿವರು ಗದಗ ಧಾರವಾಡ ಮತ್ತು ಶಾಸಕರುಗಳು ಸಂಬಂಧಪಟ್ಟವರ ಮೇಲೆ ಒತ್ತಡ ಹೇರಿ ಮೇಲ್ಸೇತುವೆಯನ್ನು ದುರಸ್ತಿ ಪಡಿಸದಿದ್ದರೆ ಲಾಕ್‍ಡೌನ್ ನಂತರ ಜನರನ್ನು ಸಂಘಟಿಸಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.