ಮೇಲ್ಮನೆ ಕದನ: 20 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು,ನ.19- ಮುಂದಿನ ತಿಂಗಳು 10 ರಂದು ರಾಜ್ಯದಲ್ಲಿ ನಡೆಯಲಿರುವ ವಿಧಾನ ಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ.
25 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಕಣಕ್ಕಿಳಿಸಲು ತೀರ್ಮಾನಿಸಿದೆ.
ಉಮೇದುವಾರಿಕೆ ಸಲ್ಲಿಸಲು 23 ಕೊನೆ ದಿನವಾಗಿದ್ದು, ನ. 24ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ನ. 26 ಕಡೆ ದಿನ.
ಡಿ. 10ರಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ಡಿ. 14ರಂದು ಫಲಿತಾಂಶ ಹೊರಬೀಳಿದೆ.

ಕ್ಷೇತ್ರ – ಅಭ್ಯರ್ಥಿಗಳ ವಿವರ

ಕೊಡಗು – ಸುಜಾ ಕುಶಾಲಪ್ಪ
ದಕ್ಷಿಣ ಕನ್ನಡ– ಕೋಟ ಶ್ರೀನಿವಾಸ ಪೂಜಾರಿ
ಚಿಕ್ಕಮಗಳೂರು– ಎಂ.ಕೆ ಪ್ರಾಣೇಶ್‌
ಶಿವಮೊಗ್ಗ– ಡಿ.ಎಸ್‌ ಅರುಣ್‌
ಧಾರವಾಡ – ಪ್ರದೀಪ್‌ ಶೆಟ್ಟರ್‌
ಬೆಳಗಾವಿ – ಮಹಂತೇಶ ಕವಟಗಿಮಠ
ಕಲಬುರಗಿ – ಬಿ.ಜಿ ಪಾಟೀಲ್‌
ಚಿತ್ರದುರ್ಗ – ಕೆ.ಎಸ್‌ ನವೀನ್‌
ಮೈಸೂರು – ರಘು ಕೌಟಿಲ್ಯ
ಹಾಸನ – ವಿಶ್ವನಾಥ್‌
ಉತ್ತರ ಕನ್ನಡ– ಗಣಪತಿ ಉಳ್ವೇಕರ್‌
ಬೀದರ್‌– ಪ್ರಕಾಶ್‌ ಖಂಡ್ರೆ
ಬೆಂಗಳೂರು – ಗೋಪಿನಾಥ್‌ ರೆಡ್ಡಿ
ಮಂಡ್ಯ – ಮಂಜು ಕೆ.ಆರ್‌ ಪೇಟೆ
ಕೋಲಾರ – ಕೆ.ಎನ್‌ ವೇಣುಗೋಪಾಲ್‌
ರಾಯಚೂರು – ವಿಶ್ವನಾಥ್‌ ಎ ಬನಹಟ್ಟಿ
ಬೆಂಗಳೂರು ಗ್ರಾಮಾಂತರ– ಬಿ.ಎಂ ನಾರಾಯಣಸ್ವಾಮಿ
ಬಳ್ಳಾರಿ – ವೈ ಎಂ ಸತೀಶ್‌
ತುಮಕೂರು – ಎನ್‌. ಲೋಕೇಶ್‌
ವಿಜಯಪುರ – ಪಿ.ಚ್‌ ಪೂಜಾರ್‌