ಮೇರು‌ನಟ ಕಮಲ್ ಹಾಸನ್ ಗೆ 66ರ ಸಂಭ್ರಮ

ಚೆನ್ನೈ.ನ.7- ದಕ್ಷಿಣ ಭಾರತದ ಮೇರು ನಟ ಕಮಲ್ ಹಾಸನ್ ಅವರಿಗೆ 66ರ ಹುಟ್ಟುಹಬ್ಬದ ಸಂಭ್ರಮ.

ವಿಭಿನ್ನ ಪಾತ್ರಗಳ ಮೂಲಕ ಹಲವು ದಶಕಗಳ ಕಾಲ ತಮಿಳು, ಕನ್ನಡ, ತೆಲುಗು ಸೇರಿದಂತೆ ವಿವಿಧ ಭಾಷೆಯ ಅಭಿಮಾನಿಗಳನ್ನು ರಂಜಿಸಿರುವ ಕಮಲ್ ಹಾಸನ್ ಅವರು ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅದರಲ್ಲೂ ಅನೇಕ ಚಿತ್ರಗಳು ಅವರ ಪ್ರತಿಭೆಯನ್ನು ಒರೆಗೆ ಹಚ್ಚುವ ಈ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿದೆ.

ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಕಮಲಹಾಸನ್ ಅವರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಮೂಲಕ ಎಲ್ಲರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.

ಕಮಲ್ ಹಾಸನ್ ನಟಿಸಿರುವ ಚಿತ್ರಗಳಲ್ಲಿ ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನಮಾನ ಪಡೆದಿದ್ದಾರೆ. ಅದರಲ್ಲಿಯೂ ಅವರ ಆರು ಚಿತ್ರಗಳು ದೇಶ ತಮಿಳುನಾಡಿನತ್ತ ತಿರುಗುವಂತೆ ಮಾಡಿದೆ.

ವಿಶ್ವರೂಪಂ, ಪುಷ್ಪಕ‌ವಿಮಾನ, ವಸೂಲ್ ರಾಜ ಎಂಬಿಬಿಎಸ್, ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರ ಅಭಿನಯ ಮನಸೂರೆಗೊಂಡಿದೆ‌.

ಶುಭಹಾರೈಕೆ:

66ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ತಮಿಳು ಚಿತ್ರರಂಗದ ಖ್ಯಾತ ನಟ ಕಮಲಹಾಸನ್ ಅವರಿಗೆ ಚಿತ್ರರಂಗದ ಅನೇಕ ಮಂದಿ ಶುಭಾಶಯಗಳು ಮಹಾಪೂರವನ್ನೇ ಹರಿಸಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಆದಿಯಾಗಿ ನಟರು ನಿರ್ದೇಶಕರು ನಿರ್ಮಾಪಕರು ಕಮಲಾಸನ್ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ