ಮೇರಿಯನ್ ರಾಬಿನ್ಸನ್ ನಿಧನ

ನ್ಯೂಯಾರ್ಕ್ ,ಜೂ.೧- ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಅತ್ತೆ ಹಾಗೂ ಅಮೆರಿಕದ ಮಾಜಿ ಪ್ರಥಮ ಮಹಿಳೆ ಮಿಚೆಲ್ ಒಬಾಮಾ ಅವರ ತಾಯಿ ಮರಿಯನ್ ಮೇರಿಯನ್ ರಾಬಿನ್ಸನ್ (೮೬) ನಿಧನರಾಗಿದ್ದಾರೆ. ಅವರು ಅಧ್ಯಕ್ಷರಾಗಿ ಆಯ್ಕೆಯಾದಾಗ ಅಳಿಯ ಬರಾಕ್ ಒಬಾಮಾ ಅವರ ಕುಟುಂಬದೊಂದಿಗೆ ಶ್ವೇತಭವನದಲ್ಲಿ ತಂಗಿದ್ದರು. ವೈಟ್ ಹೌಸ್ ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸ ಮತ್ತು ಕಚೇರಿಯಾಗಿದೆ. ಮಿಚೆಲ್ ಒಬಾಮಾ ಮತ್ತು ಇತರ ಕುಟುಂಬ ಸದಸ್ಯರು ರಾಬಿನ್ಸನ್ ಅವರ ಸಾವಿನ ಬಗ್ಗೆ ಹೇಳಿಕೆ ನೀಡಿದ್ದಾರೆ.
ರಾಬಿನ್ಸನ್ ತಮ್ಮ ಜೀವನದುದ್ದಕ್ಕೂ ಚಿಕಾಗೋದಲ್ಲಿ ನೆಲೆಸಿದ್ದರು. ೨೦೦೯ ರಲ್ಲಿ ತಮ ಮೊಮ್ಮಗಳಾದ ಮಾಲಿಯಾ ಮತ್ತು ಸಶಾಳನ್ನು ನೋಡಿಕೊಳ್ಳಲು ಶ್ವೇತಭವನಕ್ಕೆ ಆಗಮಿಸಿದ್ದರು.
ಒಬಾಮ ಹಾಗೂ ಮಿಚೆಲ್ ಅವರು ಮೇರಿಯನ್ ರಾಬಿನ್ಸನ್ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಹಾಗೆ ಬದುಕಲು ಪ್ರಯತ್ನಿಸುವುದಾಗಿ ಅವರು ಒಬಾಮ ಹೇಳಿಕೊಂಡಿದ್ದಾರೆ.
೧೯೩೭ರಲ್ಲಿ ಜನಿಸಿದ ಮೇರಿಯನ್ ರಾಬಿನ್ಸನ್ ಶಿಕ್ಷಕಿಯಾಗಿ ನಂತರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯಾದರ್ಶಿಯಾಗಿ ಕೆಲಸ ಮಾಡಿದ್ದರು. ಇವರಿಗೆ ಮಿಚೆಲ್ ಮತ್ತು ಕ್ರೇಗ್ ಎಂಬ ಇಬ್ಬರು ಮಕ್ಕಳಿದ್ದಾರೆ.