ಮೇಯರ್ ಚುನಾವಣೆ ಮುಂದೂಡಿಕೆಅಧಿಕಾರಿಗಳ  ನಿರ್ಧಾರಕ್ಕೆ ಬಿಜೆಪಿ ಪ್ರತಿಭಟನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.29: ಚುನಾವಣೆ ನಡೆಸಬೇಕಿದ್ದ ಕಲ್ಬುರ್ಗಿಯ ಪ್ರಾದೇಶಿಕ ಅಸಯುಕ್ತರು ಬರದೇ ನಿನ್ನೆ ಇಲ್ಲಿನ ಪಾಲಿಕೆಯ ಮೇಯರ್ ಚುನಾವಣೆಯನ್ನು ಮುಂದೂಡಿದ ಅಧಿಕಾರಿಗಳ ಧೋಣೆಯನ್ನು ಖಂಡಿಸಿ ಬಿಜೆಪಿ ನಿನ್ನೆ ಸಂಜೆ ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಪಕ್ಷದ ಜಿಲ್ಲಾ ಅಧ್ಯಕ್ಷ ಗೋನಾಳ್ ಮುರಹರಗೌಡ ನೇತೃತ್ವದಲ್ಲಿ ಅನಿಲ್ ಮೋಕಾ, ಪಾಲಿಕೆ ಸದಸ್ಯರಾದ ಶ್ರೀನಿವಾಸ ವಾಸ್ ಮೋತ್ಕರ್, ಇಬ್ರಾಹಿಂ ಬಾಬು, ಹನುಂಮತ, ಎಂ.ಗೋವಿಂದರಾಜುಲು,   ಸುರೇಖಾ ಮಲ್ಲನಗೌಡ ಮೊದಕಾದವರು.
ಮೇಯ‌ರ್ ಚುನಾವಣೆ ಮುಂದೂಡಿದ ಅಧಿಕಾರಿಗಳ ಕ್ರಮ ಖಂಡಿಸಿ  ಪ್ರತಿಭಟನೆ ನಡೆಸಿದರು.
ನಿಗದಿಯಂತೆ ಚುನಾವಣೆ ಪ್ರಕ್ರಿಯೆ ನಡೆದರೂ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರು ಗೈರು ಎನ್ನುವ ನೆಪವೊಡ್ಡಿ ಅಧಿಕಾರಿಗಳು ಚುನಾವಣೆಯನ್ನು ಮುಂದೂಡಿರುವ ಕ್ರಮ ಸಂವಿಧಾನ ಬಾಹಿರವಾಗಿದೆಂದರು.
ಅಧಿಕಾರಿಗಳು ಕಾಂಗ್ರೆಸ್‌ ಸರ್ಕಾರದ ಕೈಗೊಂಬೆಯಾಗಿ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಯಾವುದೇ ಚುನಾವಣೆ ಇರಲಿ ಒಂದು ನಿಮಿಷ ತಡವಾದರೂ ಅಧಿಕಾರಿಗಳು ಒಪ್ಪಲ್ಲ, ನಿಗಧಿತ ಸಮದಲ್ಲಿ ಸಭಾಂಗಣದಲ್ಲಿ ಸದಸ್ಯರು ಆಸೀನರಾದರೂ, ಅಧಿಕಾರಿಗಳು ಪ್ರಾದೇಶಿಕ ಆಯುಕ್ತರು ಬಂದಿಲ್ಲ ಎಂದು ಮಹ್ಯಾಹ್ನ 1:30ರ ವರೆಗೆ ಕಾಲಹರಣ ಮಾಡಿ, ನಂತರ ಮೇಲಧಿಕಾರಿಗಳ ಆದೇಶ, ಚುನಾವಣೆ ಮುಂದೂಡಲಾಗಿದೆ ಅಂದ್ರೆ, ಇದು ಸರಿಯಾದ ಕ್ರಮ ಅಲ್ಲ.  ನಿಗದಿಯಂತೆ ಅಧಿಕಾರಿಗಳು ಚುನಾವಣೆ ನಡೆಸಬೇಕಿತ್ರು ಎಂದರು.
ಮೇಯ‌ರ್ ಸ್ಥಾನ ಎಸ್ಸಿ ವರ್ಗಕ್ಕೆ ಮಿಸಲಾಗಿದ್ದು, ಬಿಜೆಪಿ ಸದಸ್ಯ ಹನುಮಂತ ಗುಡಿಗಂಟೆ ಅವರು, ನಾಮಪತ್ರ ಸಲ್ಲಿಸಿದ್ದರು, ಕಾಂಗ್ರೆಸ್ ನಲ್ಲಿನ ಭಿನ್ನಮತದಿಂದ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆಂದು ಭಾವಿಸಿ  ಕಾಂಗ್ರೆಸ್‌ ನವರು ಉದ್ದೇಶಪೂರ್ವಕವಾಗಿ ಚುನಾವಣೆಯನ್ನು ಮುಂದೂಡಿದ್ದಾರೆ. ಕಾಂಗ್ರೆಸ್ ನವರಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ, ಕಾಂಗ್ರೆಸ್ ದಲಿತ ವಿರೋಧಿಯಾಗಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ಗುಡಿಗಂಟೆ ಹನುಮಂತ ಅವರು ತಟ್ಟೆ, ಚಮಚ ಹಿಡಿದು ಬಾರಿಸುವ ಮೂಲಕ ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು