ಮೇಯರ್ ಆಯ್ಕೆಗೆ ಒಗ್ಗಟ್ಟಿನ  ಸಭೆ


* ಅಲ್ಲಂ ಭವನದಲ್ಲಿ ಸಭೆ
* ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ನೇತೃತ್ವದಲ್ಲಿ ಸಭೆ
* ಆಕಾಂಕ್ಷಿಗಳೆಲ್ಲ ಒಗ್ಗಟ್ಟಾಗಿ ಬನ್ನಿ
* ಒಗ್ಗಟ್ಟಾಗದಿದ್ದರೆ ಹೈಕಮಾಂಡಿಗೆ ಬಿಡಿ

(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.26: ನಗರ ಪಾಲಿಕೆಯ ಮೇಯರ್ ಆಯ್ಕೆ ಕುರಿತು ನಿನ್ನೆ  ನಗರದ ಅಲ್ಲಂ‌ಭವನದಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ  ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಮೇಯರ್, ಉಪ‌ ಮೇಯರ್, ಪಕ್ಷದ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ಮುಖಂಡ ಜೆ.ಎಸ್.ಅಂಜನೇಯಲು, ಪಾಲಿಕೆ ಸದಸ್ಯರು ಇದ್ದರು.
ಸಭೆಯಲ್ಲಿ ಗ್ರಾಮೀಣ ಶಾಸಕ ನಾಗೇಂದ್ರ ಅವರು ಮಾತನಾಡಿ ಆಕಾಂಕ್ಷಿಗಳೆಲ್ಲ ಒಗ್ಗಟ್ಟಾಗಿ ಬನ್ನಿ ನೀವೆ ಒಬ್ಬರನ್ನು ಸೂಚಿಸಿ ನಾವು ಅವರನ್ನು ಬೆಂಬಲಿಸುತ್ತೇವೆ. ಕಳೆದ ಬಾರಿಯಂತೆ ವಿನಾಕಾರಣ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಬೇಡ, ನಿಮ್ಮ‌ತೀರ್ಮಾನವೇ ನಮಗಮ ತೀರ್ಮಾನ ಎಂದರಂತೆ.
ಅಲ್ಲಂ ವೀರಭದ್ರಪ್ಪ ಅವರು ಮಾತನಾಡಿ, ಈಗಾಗಲೇ ಕಳೆದ ಅವಧಿಯಲ್ಲಿ ಅವಕಾಶ ಪಡೆದವರನ್ನು ಬಿಟ್ಟು ಉಳಿದ ಸದಸ್ಯರಿಗೆ ಬರುವ ನಾಲ್ಕು ಅವಧಿಯಲ್ಲಿ ಮೇಯರ್, ಉಪ ಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷರ ಅವಕಾಶ ನೀಡಲಿದೆ. ಹೀಗೆ ಮಾಡಿದರೆ ಎಲ್ಲಾ ಸದಸ್ಯರಿಗೆ ಒಂದಲ್ಲ, ಒಂದು ಅವಕಾಶ ದೊರೆಯಲಿದೆ. ಮೇಯರ್ ಉಪ ಮೇಯರ್ ಸ್ಥಾನಗಳು ಸಹ ಮೀಸಲಾತಿಯಂತೆ ದೊರೆಯಲಿವೆ. ಈ ಬಾರಿ ಮೇಯರ್ ಆಕಾಂಕ್ಷಿಗಳಾಗಿರುವ ನೀವೆಲ್ಲ ಒಗ್ಗಟ್ಟಾಗಿ ಬನ್ನಿ, ನಾಳೆ ಮತ್ತೆ ಒಂದು ಸಭೆ ಕರೆಯಲಿದೆ. ಗೊಂದಲಗಳು ಬೇಡ, ಗೊಂದಲ. ಆದರೆ ಪಕ್ಷದ ಹೊರಗಿನವರು ಮಧ್ಯ ಪ್ರವೇಶ ಮಾಡಬೇಕಾಗುತ್ತದೆ. ಅದಕ್ಕಾಗಿ ಏನಿದ್ದರೂ ನಮ್ಮಲ್ಲಿ ನಾವು ಬಗೆಹರಿಸಿಕೊಳ್ಳೋಣ ಒಗ್ಗಟ್ಟು ಪ್ರದರ್ಶಿಸೋಣ ಎಂದರಂತೆ.
ಒಗ್ಗಟ್ಟಿನಿಂದ ಒಮ್ಮತದ ಆಭ್ಯರ್ಥಿ ಆಯ್ಕೆ ಮಾಡುವುದು ಕಷ್ಟವಿದೆ. ಆಗದಿದ್ದರೆ ಆಕಾಂಕ್ಷಿಗಳಲ್ಲಿ ಯಾರಿಗೆ ಮಾಡಬೇಕೆಂದು ಆಂತರಿಕವಾಗಿ ಗುಪ್ತ ಚುನಾವಣೆ ನಡೆಸಿ ಯಾರಿಗೆ  ಹೆಚ್ಚು ಸದಸ್ಯರು ಬೆಂಬಲ ನೀಡುತ್ತಾರೆ ಅವರನ್ನು ಮಾಡೋಣ ಎಂಬ ಚರ್ಚೆಯೂ ನಡೆದಿದೆಯಂತೆ.
ಈ ಅಭಿಪ್ರಾಯ ಬರುತ್ತಿದ್ದಂತೆ ಓರ್ವ ಆಕಾಂಕ್ಷಿ ನಾನು ಪ್ರತಿ ಸದಸ್ಯರಿಗೆ ಐದು ಲಕ್ಷ ಕೊಡುವೆ ನನಗೆ ಬೆಂಬಲಿಸಿ ಎಂದು ಮಾತುಕತೆ ನಡೆಸಿದ್ದಾರಂತೆ.
ಒಟ್ಟಾರೆ ಮೇಯರ್ ಪಟ್ಟ ಸಾಮಾಜಿಕ ನ್ಯಾಯಕ್ಕೋ, ಹಿರಿತನಕ್ಕೋ, ಹಣಕೊಟ್ಟವರಿಗೋ ದೊರೆಯುತ್ತದೆಂಬುದನ್ನು, 
ಅಲ್ಲದೆ ನಾಳಿನ ಸಭೆಯಲ್ಲಿ ಯಾವ ತೀರ್ಮಾನ ಆಗುತ್ತೆ ಎಂಬುದನ್ನು ಕಾದು ನೋಡಬೇಕಿದೆ