ಮೇದಾರ ಗಿರಿಜನ ಸಂಘದಿಂದ ಸೆ.7ರಂದು ಧಾರ್ಮಿಕ ಸಮಾರಂಭ

ದಾವಣಗೆರೆ.ಸೆ.೨; ನಗರದ ಬಂಬೂ ಬಜಾರ್ ರಸ್ತೆಯಲ್ಲಿರುವ  ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಹಾಗೂ ಮೇದಾರ ಗಿರಿಜನ ಅಭ್ಯುದಯ ಸೇವಾ ಸಂಘ, ಮೇದಾರ ಸಮಾಜದಿಂದ 50ನೇ ಶ್ರೀ ಗಣೇಶ ಸುವರ್ಣ ಮಹೋತ್ಸವದ ಅಂಗವಾಗಿ ಸೆ.7ರಂದು ಧಾರ್ಮಿಕ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಬಸವರಾಜ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ‌.7ರ  ಸಂಜೆ 6ಕ್ಕೆ ನಗರದ ಬಂಬೂ ಬಜಾರ್ ರಸ್ತೆಯಲ್ಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಆವರಣ ಆಯೋಜಿಸಲಾಗಿದೆ.ಚಿತ್ರದುರ್ಗದ ಶಿಬಾರದಲ್ಲಿನ ಅಖಿಲ ಕರ್ನಾಟಕ ಶ್ರೀಗುರು ಮೇದಾರ ಕೇತೇಶ್ವರ ಟ್ರಸ್ಟ್‌ನ ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸುವರು. ಜಗಳೂರು ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ ನೀಡುವರು.ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಸೇವಾ ಸಂಘ, ಮೇದಾರ ಸಮಾಜದ ಅಧ್ಯಕ್ಷ ಟಿ. ಬಸವರಾಜ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ,  ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಚಿತ್ರದುರ್ಗದ ಅಖಿಲ ಭಾರತ ಕರ್ನಾಟಕ ಶ್ರೀ ಗುರು ಮೇದಾರ ಕೇತೇಶ್ವರ ಟ್ರಸ್ಟ್‌, ಶೀಬಾರದ ಶ್ರೀ ಕೇತೇಶ್ವರ ಮಹಾಮಠದ ಅಧ್ಯಕ್ಷ ಸಿ.ಪಿ.ಪಾಟೀಲ್, ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಪಿ.ಎಸ್. ಕಾಂತರಾಜ್, ಉಪನಿರ್ದೆಶಕ ಎಂ.ಹೆಚ್‌. ಸುರೇಶರೆಡ್ಡಿ, ದಾವಣಗೆರೆ ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿ ಕೆ.ಜಿ.ಎಸ್‌. ಮಂಜುನಾಥ ನಾಯ್ಕ, ಪಾಲಿಕೆ ಸದಸ್ಯ ಶಿವಪ್ರಕಾಶ್ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ನಿರಂತರ 28 ದಿನಗಳ ಕಾಲ ಶ್ರೀ ಕೇದಾರನಾಥ ದೇವಾಲಯದ ಮಾದರಿಯನ್ನು ನಿರ್ಮಿಸಲು ನಿರಂತರ ಕಾರ್ಯ ನಡೆದು 30 ಅಡಿ ಅಗಲ, 45 ಅಡಿ ಉದ್ದ, 55 ಅಡಿ ಎತ್ತರವನ್ನು ಹೊಂದಿರುವ ಬೃಹತ್‌ ಶ್ರೀ ಕೇದಾರನಾಥ ದೇವಾಲಯ ಮಂದಿರವನ್ನು ನಿರ್ಮಿಸಲಾಗಿದೆ. ಪ್ರತಿ ದಿನ 80 ರಿಂದ 100 ಜನ ಕಾರ್ಯಕರ್ತರು ಕಾರ್ಯನಿರ್ವಹಿಸಿ, ಯಶಸ್ವಿಯಾಗಿ ಪೂರೈಸಿದ್ದಾರೆ. ಸಂಪೂರ್ಣವಾಗಿ ಮೇದಾರ ಸಮಾಜದ ಯುವಕರೇ ಕಾರ್ಯನಿರ್ವಹಿಸಿದ್ದು, ಕೋಲು, ವೋಲ್ಸ್ ಗಳು, ಬಿದಿರು, ಬಂಬೂ ಸೇರಿದಂತೆ ಇತರ ವಸ್ತುಗಳನ್ನು ದಾನದ ರೂಪದಲ್ಲಿ ಪಡೆಯಲಾಗಿದೆ.  ಕೆಲಸಗಾರರು, ಕುಶಲಕರ್ಮಿಗಳು ಯಾವುದೇ ರೀತಿಯ ಕೂಲಿಯನ್ನು ಪಡೆಯದೇ ಸೇವಾ ದೃಷ್ಟಿಯಿಂದ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಸಂಘದ ಎಂ.ತಿಮ್ಮಣ್ಣ, ಕೆ.ಹನುಮಂತಪ್ಪ, ಯು.ಗಿರೀಶ್, ಕೆ.ನಾಗರಾಜ್, ಎಂ.ಟಿ. ನಾಗರಾಜ್  ಇದ್ದರು.

Attachments area