
ಕೋಲಾರ,ಆ.೧- ತಾಲೂಕಿನ ಮೇಡಿಹಾಳ ಸರ್ಕಾರಿ ಪ್ರೌಢಶಾಲೆಗೆ ಜಿಲ್ಲಾಧಿಕಾರಿ ಅಕ್ರಂಪಾಷ ಭಾನುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಸರ್ಕಾರಿ ಪ್ರೌಢಶಾಲೆಯ ಜಾಗ ಇದುವರೆಗೂ ಗೋಮಾಳ ಜಮೀನನಲ್ಲೆ ಇದ್ದರು ಸಹ ಯಾರು ಏನು ತೊಂದರೆ ಮಾಡಿಲ್ಲ, ಮೇಡಿಹಾಳ ಮುನಿಆಂಜಿ ಹಾಗೂ ಗ್ರಾಮಸ್ಥರ ಪ್ರೌಢಶಾಲೆಯ ಜಮೀನಿನ ದಾಖಲೆಗಳನ್ನು ಮಾಡಿಸಲು ಡಾ ಸುಮಾರು ೬ ತಿಂಗಳಿಂದ ಓಡಾಡಿ ಅಧಿಕಾರಿಗಳಿಂದ ಪ್ರೌಢಶಾಲೆಗೆ ಸಂಬಂಧಪಟ್ಟಂತೆ ದಾಖಲಾತಿಗಳನ್ನು ಮಾಡಿಸುವ ಕೊನೆ ಹಂತಕ್ಕೆ ಜಿಲ್ಲಾಧಿಕಾರಿ ಸಹಿ ಆದೇಶಕ್ಕೆ ಕಾಯುತ್ತಿದ್ದೇವೆಂದು ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿ ಶಾಲೆಗೆ ಬೇಟಿ ನೀಡಿ ಪರಿಶೀಲಿಸಿ ನಾಳೆ ಅಂದರೆ ಸೋಮವಾರವೇ ಪ್ರೌಢಶಾಲೆಗೆ ಸಂಬಂಧಿಸಿದ ದಾಖಲಾತಿಗಳಿಗೆ ಸಹಿ ಮಾಡುವುದಾಗಿ ಭರವಸೆ ನೀಡಿದರು.
ತಹಸೀಲ್ದಾರ್ ಹರ್ಷವರ್ಧನ್, ರಾಜಸ್ವ ನೀರಿಕ್ಷಕರಾದ ಬಿ.ಮಂಜುನಾಥ್, ರಾಜೇಂದ್ರ ಪ್ರಸಾದ್ ಇದ್ದರು.