ಮೇಡಂ ಚೀಫ್ ಮಿನಿಸ್ಟರ್’ ದಲಿತ ಹುಡುಗಿಯ ಸಂಘರ್ಷದ ಫಿಲ್ಮ್

ಬಾಲಿವುಡ್ ನಟಿ ರಿಚಾ ಚಡ್ಡಾ ಅವರ ಫಿಲ್ಮ್ ಮೇಡಂ ಚೀಫ್ ಮಿನಿಸ್ಟರ್ ಜನವರಿ ೨೨ರಂದು ಟಾಕೀಸುಗಳಲ್ಲಿ ರಿಲೀಸ್ ಆಗಲಿದೆ .ಇದರ ಟ್ರೇಲರ್ ಬಿಡುಗಡೆಗೊಂಡಿದೆ .ಇದರಲ್ಲಿ ಭರ್ಜರಿ ಪೊಲಿಟಿಕಲ್ ಡ್ರಾಮಾ ನೋಡಲು ಸಿಗುವುದು . ಈ ಫಿಲ್ಮ್ ಒಂದು ದಲಿತ ಹುಡುಗಿಯ ಸಂಘರ್ಷದ ಆಧಾರಿತವಾಗಿದೆ.


ದಲಿತ ಸಮಾಜದ ಈ ಹುಡುಗಿ ಸಂಘರ್ಷದ ನಂತರ ಮುಖ್ಯಮಂತ್ರಿಯಾಗುತ್ತಾರೆ. ಮೇಡಂ ಚೀಫ್ ಮಿನಿಸ್ಟರ್ ಯಾರಿಗೂ ತಲೆಬಾಗುವುದಿಲ್ಲ.ತನ್ನ ಕೆಲಸದ ಬಲದಲ್ಲೇ ಆಡಳಿತದ ಉನ್ನತ ಸ್ಥಾನ ತಲುಪುತ್ತಾರೆ.
ಈ ಫಿಲ್ಮ್ ನಲ್ಲಿ ಸಮಾಜದ ಅನೇಕ ಮಗ್ಗಲುಗಳ ಕಾಣಲು ಸಿಗುವುದು. ಸಮಾಜದ ನ್ಯೂನತೆಗಳ ವಿಮರ್ಶೆಯೂ ನಡೆಯುವುದು.


ಫಿಲ್ಮ್ ನ ನಿರ್ದೇಶನವನ್ನು ’ಜಾಲಿ ಎಲ್ ಎಲ್ ಬಿ’ ಫಿಲ್ಮ್ ನ ಪ್ರಸಿದ್ಧ ನಿರ್ದೇಶಕ ಸುಭಾಷ್ ಕಪೂರ್ ಮಾಡಿದ್ದಾರೆ .ಅವರೇ ಇದರ ಕಥೆಯನ್ನೂ ಬರೆದಿದ್ದಾರೆ .
ಫಿಲ್ಮ್ ನಲ್ಲಿ ರಿಚಾ ಚಡ್ಡಾ ಹೊರತಾಗಿ ಮಾನವ ಕೌಲ್ , ಸೌರಭ್ ಶುಕ್ಲ ಇದ್ದಾರೆ.
ಫಿಲ್ಮ್ ನ ಮೂರು ನಿಮಿಷದ ಟ್ರೈಲರ್ ಈಗಾಗಲೇ ಜನರ ಆಕರ್ಷಣೆ ಪಡೆದಿದೆ. ನಿರ್ದೇಶಕ ಸುಭಾಷ್ ಕಪೂರ್ ದೇಶದ ಪೊಲಿಟಿಕ್ಸ್’ ನ್ನೂ ಇಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ .ರಿಚಾ ಚಡ್ಡಾ ಅವರ ಅಭಿನಯ ಗಮನಸೆಳೆದಿದೆ.

ಕಳೆದ ೨೦೨೦ ರಲ್ಲಿ ಅಲಿ ಫಝಲ್ ಮತ್ತು ರಿಚಾ ಚಡ್ಡಾ ವಿವಾಹವಾಗುವರಿದ್ದರು. ಮೊದಲು ಲಾಕ್ಡೌನ್ ,ನಂತರ ಅಲಿ ಫಝಲ್ ಅವರ ತಾಯಿಯ ನಿಧಾನದಿಂದ ವಿವಾಹವು ಮುಂದಕ್ಕೆ ಹೋಗಿತ್ತು. ಈ ವರ್ಷ ಇವರು ವಿವಾಹವಾಗುವರೋ ಕಾದುನೋಡಬೇಕು.

ಶಿಲ್ಪಾ ಶಿರೋಡ್ಕರ್ ಕೊರೊನಾ ವ್ಯಾಕ್ಸಿನ್ ಪಡೆದ ಮೊದಲ ಭಾರತೀಯ ನಟಿ

ಬಾಲಿವುಡ್ ನ ನಟಿ ಶಿಲ್ಪಾ ಶಿರೋಡ್ಕರ್ ಕೊರೋನಾ ವ್ಯಾಕ್ಸಿನ್ ಚುಚ್ಚಿಸಿಕೊಂಡ ಮೊದಲ ಭಾರತೀಯ ನಟಿ ಎನ್ನಿಸಿಕೊಂಡರು.
ವ್ಯಾಕ್ಸಿನ್ ಚುಚ್ಚಿಸಿಕೊಂಡ ನಂತರ ತನ್ನ ಮೊದಲ ಫೋಟೋವನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿದ್ದಾರೆ .ಹಾಗೂ ಹೊಸವರ್ಷದ ಸ್ವಾಗತವನ್ನು ಪೊಸಿಟಿವ್ ಯೋಚನೆಯಲ್ಲಿ ಹಂಚಿಕೊಂಡಿದ್ದಾರೆ.


ಈ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇಡೀ ವಿಶ್ವ ೨೦೨೦ ರಲ್ಲಿ ಕೊರೋನಾದ ಆತಂಕದಿಂದ ಕಳೆಯಿತು. ಜನರು ಈ ಅಪಾಯಕಾರಿ ವೈರಸ್ಸಿನ ವ್ಯಾಕ್ಸಿನ್ ಗಾಗಿ ತುದಿಗಾಲಲ್ಲಿ ನಿರೀಕ್ಷೆ ಮಾಡುತ್ತಿದ್ದಾರೆ. ಈಗ ಅನೇಕ ದೇಶಗಳಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆ ಆರಂಭವಾಗಿದೆ.
ಶಿಲ್ಪಾ ಶಿರೋಡ್ಕರ್ ದುಬಾಯಿಂದ ಒಂದು ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ .ಈ ಚಿತ್ರದಲ್ಲಿ ಅವರ ತೋಳಿಗೆ ಮೆಡಿಕಲ್ ಟೇಪ್ ಮತ್ತು ಕಾಟನ್ ತಾಗಿಸಿರುವುದು ಕಂಡುಬಂದಿದೆ.
ಅವರು ಬರೆದಿದ್ದಾರೆ- ಥ್ಯಾಂಕ್ಯು ಯು.ಐ.
ಶಿಲ್ಪಾ ಈ ಚಿತ್ರದ ಜೊತೆ ಮಾಸ್ಕ್ ಹಾಕಿಕೊಂಡಿದ್ದಾರೆ . ಶಿಲ್ಪಾ ಅಭಿಮಾನಿಗಳು ಅವರನ್ನು ಪ್ರಶಂಸಿಸಿದ್ದಾರೆ.
ಶಿಲ್ಪಾ ಯು.ಕೆ ಬೇಸ್ಡ್ ಬ್ಯಾಂಕರ್ ಆಪ್ರೇಶ್ ರಂಜೀತ್ ಜೊತೆ ೨೦೦೦ದಲ್ಲಿ ವಿವಾಹವಾಗಿದ್ದರು. ನಂತರ ಫ್ಯಾಮಿಲಿ ಜೊತೆ ದುಬಾಯಿಯಲ್ಲೇ ವಾಸಿಸುತ್ತಿದ್ದಾರೆ.