ಮೇಜರ್ ರಾಧಿಕಾ ಸೇನ್‌ಗೆ ಪ್ರತಿಷ್ಠಿತ ಗೌರವ

ನ್ಯೂಯಾರ್ಕ್,ಮೇ.೨೯-ಆಫ್ರಿಕನ್ ದೇಶವಾದ ಕಾಂಗೋದಲ್ಲಿ ವಿಶ್ವಸಂಸ್ಥೆಯ ಮಿಷನ್‌ನೊಂದಿಗೆ ಕೆಲಸ ಮಾಡಿದ ಭಾರತೀಯ ಮಹಿಳಾ ಶಾಂತಿಪಾಲಕಿ ಮೇಜರ್ ರಾಧಿಕಾ ಸೇನ್ ಅವರು ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ . ಮೇಜರ್ ರಾಧಿಕಾ ಸೇನ್ ಅವರನ್ನು ಮಿಲಿಟರಿ ಪ್ರಶಸ್ತಿಯೊಂದಿಗೆ ಗೌರವಿಸಲಾಗುತ್ತದೆ.ಅವರು ಪ್ರತಿಷ್ಠಿತ ಮಿಲಿಟರಿ ಜೆಂಡರ್ ಅಡ್ವೊಕೇಟ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟೆರಸ್ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರನ್ನು ಶ್ಲಾಘಿಸಿದರು. ಅವರು ನಿಜವಾದ ಮತ್ತು ಆದರ್ಶಪ್ರಾಯ ನಾಯಕಿ ಎಂದು ಬಣ್ಣಿಸಿದ್ದಾರೆ.
ಮೇ ೩೦ ರಂದು ಅಂತರರಾಷ್ಟ್ರೀಯ ವಿಶ್ವಸಂಸ್ಥೆಯ ಶಾಂತಿಪಾಲನಾ ದಿನದ ಸಂದರ್ಭದಲ್ಲಿ ಮೇಜರ್ ರಾಧಿಕಾ ಸೇನ್ ಅವರಿಗೆ ೨೦೨೩ ರ ಯುನೈಟೆಡ್ ನೇಷನ್ಸ್ ಮಿಲಿಟರಿ ಜೆಂಡರ್ ಅಡ್ವೊಕೇಟ್ ಆಫ್ ದಿ ಇಯರ್ ಪ್ರಶಸ್ತಿಯನ್ನು ನೀಡಲಾಗುವುದು .
ಮೇಜರ್ ಸೇನ್ ಅವರು ಮಾರ್ಚ್ ೨೦೨೩ ರಿಂದ ಏಪ್ರಿಲ್ ೨೦೨೪ ರವರೆಗೆ ಪೂರ್ವ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಭಾರತೀಯ ರಾಪಿಡ್ ಡಿಪ್ಲೋಯ್ಮೆಂಟ್ ಬೆಟಾಲಿಯನ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಅವರು ಮೂಲತಃ ಹಿಮಾಚಲ ಪ್ರದೇಶದವರು. ೧೯೯೩ ರಲ್ಲಿ ಜನಿಸಿದ ಅವರು ಎಂಟು ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರಿದ್ದಾರೆ.
ಮೇಜರ್ ರಾಧಿಕಾ ಸೇನ್ ಬಯೋಟೆಕ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದು ಭಾರತೀಯ ಸೇನೆಗೆ ಸೇರಲು ನಿರ್ಧರಿಸಿದರು.
ಮೇಜರ್ ಸುಮನ್ ಗವಾನಿ ನಂತರ ೨೦೨೩ ರ ವಿಶ್ವಸಂಸ್ಥೆಯ ಮಿಲಿಟರಿ ಜೇಂಡರ ಅಡ್ವೊಕೇಟ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಪಡೆದ ಎರಡನೇ ಭಾರತೀಯ ಶಾಂತಿಪಾಲಕಿ ರಾಧಿಕಾ.
ಮೇಜರ್ ಗವಾನಿ ವಿಶ್ವಸಂಸ್ಥೆಯ ಮಿಷನ್‌ನಲ್ಲಿ ಸೇವೆ ಸಲ್ಲಿಸಿದರು. ೨೦೧೯ ರಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಭಾರತವು ಪ್ರಸ್ತುತ ವಿಶ್ವಸಂಸ್ಥೆಗೆ ಮಹಿಳಾ ಮಿಲಿಟರಿ ಶಾಂತಿಪಾಲಕರ ೧೧ ನೇ ಅತಿದೊಡ್ಡ ಕೊಡುಗೆಯಾಗಿದೆ.