ಮೇಜರ್ ಧ್ಯಾನ್‌ಚಂದ್, ಮೈಕಲ್ ಜಾಕ್ಸನ್ ಹುಟ್ಟುಹಬ್ಬ ಆಚರಣೆ

ರಾಯಚೂರು,ಆ.೩೧- ನಗರದ ವಿಜೆ ಇಂಟರ್ನ್ಯಾಷನಲ್ ಪ್ರೊಡಕ್ಷನ್ ವತಿಯಿಂದ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ಚಂದ್, ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ನೃತ್ಯಪಟು ಮೈಕಲ್ ಜಾಕ್ಸನ್ ಇವರ ಹುಟ್ಟು ಹಬ್ಬವನ್ನು ಅಂತರಾಷ್ಟ್ರೀಯ ಖ್ಯಾತಿಯ ಇವೆಂಟ್ ಮ್ಯಾನೇಜರ್ ಆದ ಡಾ. ವೀರೇಂದ್ರ ಜಲ್ದಾರ್ ಇವರ ನೇತೃತ್ವದಲ್ಲಿ ಸಂಜೆ ಇಂದು ರಾಯಚೂರ್ ಪ್ರೊಡಕ್ಷನ್ ಕಚೇರಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಡಾ .ವೀರೇಂದ್ರ ಜಲ್ದಾರ್ ಅವರು ಮಾತನಾಡಿ, ಹಾಕಿ ಮಾಂತ್ರಿಕ, ಧ್ಯಾನ್ ಚಂದ್, ಹಾಗೂ ಶ್ರೇಷ್ಠ ಅಂತರಾಷ್ಟ್ರೀಯ ಡ್ಯಾನ್ಸರ್ ಮೈಕಲ್ ಜಾಕ್ಸನ್ ಸಾಧಕರ ಜನ್ಮದಿನದಂದು ರಾಯಚೂರಿನಲ್ಲಿ ವಿ ಜೆ ಇಂಟರ್ನ್ಯಾಷನಲ್ ಪ್ರೊಡಕ್ಷನ್ ವತಿಯಿಂದ ರಾಜ್ಯಮಟ್ಟದ ಯುವ ನೃತ್ಯ ಹಾಗೂ ಸಂಗೀತೋತ್ಸವ ಕಾರ್ಯಕ್ರಮವನ್ನು ರಾಜ್ಯದ ಯುವಕರಿಗೆ ಬರುವ ಡಿಸೆಂಬರ್ ಮೊದಲ ವಾರದಲ್ಲಿ ನಗರದಲ್ಲಿ ಹಮ್ಮಿಕೊಳ್ಳಲಾಗುವುದೆಂದು ಈ ಸಂದರ್ಭದಲ್ಲಿ ನಿರ್ಧರಿಸಲಾಗಿದೆ, ಈ ನಿಟ್ಟಿನಲ್ಲಿ ಕಾರ್ಯಕ್ರಮದ ಯಶಸ್ವಿಗೊಸ್ಕರ ನಗರದ ಕಲಾವಿದರನ್ನು, ಸಂಘಟಕರನ್ನು ಒಳಗೊಂಡಂತೆ ಹಲವಾರು
ಸಮಿತಿಗಳನ್ನು ರಚಿಸಿ ರಾಜ್ಯಮಟ್ಟದ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಖ್ಯಾತ ನಿರೂಪಕರಾದ ಮುರಳಿಧರ ಕುಲಕರ್ಣಿ ಅವರು ಮಾತನಾಡಿ
ಡಾ. ವೀರೇಂದ್ರ ಜಲ್ದಾರ್ ಇವರು ಅಂತರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಪಡೆದಿದ್ದು ಈಗಾಗಲೇ ೬೦೦ ನೃತ್ಯ ಪ್ರದರ್ಶನಗಳನ್ನು ದೇಶದಾದ್ಯಂತ ನೀಡಿ ಹೆಸರು ಮಾಡಿದ್ದಾರೆ. ಇಂತಹ ಕಲಾವಿದರು ರಾಯಚೂರಿಗೆ ಆಗಮಿಸಿ ರಾಜ್ಯಮಟ್ಟದ ವರ್ಣರಂಜಿತ ಕಾರ್ಯಕ್ರಮವನ್ನು ನಗರದಲ್ಲಿ ಏರ್ಪಡಿಸುವ ಮುಖಾಂತರ ಹಲವಾರು ಪ್ರತಿಭಾನ್ವಿತ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಅಲ್ಲದೆ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಡಾಯ್ಯಸಿಲ್ ಸೂಪರ್ ಸ್ಟಾರ್ ಚಲನಚಿತ್ರದಲ್ಲಿ ಸ್ಥಳೀಯ ಯುವಕರಿಗೆ ಅವಕಾಶವನ್ನು ಕಲ್ಪಿಸಿ ಅವರಿಗೆ ಪ್ರೋತ್ಸಾಹಿಸುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಕಲಾವಿದರು ಭಾಗವಹಿಸಿದ್ದರು.ದೂರದರ್ಶನ ಕಲಾವಿದರಾದ ನಬಿಬೇಗ್, ಮೊಹಮ್ಮದ್ ಇಕ್ಬಾಲ್, ಗಾಯಕರು ಅನಿಲ್ ಕುಮಾರ್. ಡಾಕ್ಟರ್ ಆನಂದ್, ನಿರೂಪಕರಾದ ಶ್ರೀ ಗೌರಿ, ಗಾಯಕರಾದ ಮೊಹಮ್ಮದ್ ಫಾರೂಕ್, ಇಮ್ರಾನ್ ಅಹಮದ್, ವಿನೋದ್ ಕುಮಾರ್, ಮಹೇಶ್ ಕುಮಾರ್,
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಆನಂದ್, ಅಕ್ಷಯ್ ಮತ್ತು ವಿನಾಯಕ್,ಇವುರಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.