ಮೇಘ ಸ್ಟಾರ್ : ಬೇಗ ಗುಣಮುಖರಾಗಲು ವಿಶೇಷ ಪೂಜೆ

ರಾಯಚೂರು.ನ.11.ತೆಲುಗು ಚಿತ್ರರಂಗದ ಖ್ಯಾತ ಸಿನಿಮಾ ನಟ ಮೇಘ ಸ್ಟಾರ್ ಚಿರಂಜೀವಿ ಅವರು ಬೇಗ ಗುಣಮುಖ ವಾಗಲಿ ಎಂದು ರಾಯಚೂರು ಮೇಘ ಸ್ಟಾರ್ ಚಿರಂಜೀವಿ ಅಭಿಮಾನಿ ಬಳಗದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಚಿರಂಜೀವಿ ಅವರಿಗೆ ಕೊರೊನ ಪಾಸಿಟಿವ್ ದೃಢವಾಗಿದ್ದು ಈ ಹಿನ್ನಲೆಯಲ್ಲಿ ನಗದ ಅವರ ಅಭಿಮಾನಿಗಳು ಚಿರಂಜೀವಿ ಬೇಗ ಗುಣಮುಖ ವಾಗಲಿ ಎಂದು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂದರ್ಭದಲ್ಲಿ ವಿಠ್ಠಲ ರೆಡ್ಡಿ. ಹೊನಪ್ಪ ಅದೇಪ್ಪ,ವಿಶಾಲ್ ಜಿ. ಎನ್,ವೆಂಕಟೇಶ್ ,ಶ್ರೀನಿವಾಸ್, ಹನುಮಂತ ,ಸೀನು, ವೆಂಕಿ ,ಶಾಲಾಮ್, ಜನಾರ್ದನ ರೆಡ್ಡಿ ಸೇರಿದಂತೆ ಇನ್ನಿರರು ಉಪಸ್ಥಿತರಿದ್ದರು.