ಮೇಘ ಸೌಹಾರ್ದ ಕ್ರೆಡಿಟ್ ಬ್ಯಾಂಕಿನ ಸಾಮಾನ್ಯ ಸಭೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.04: ಮೇಘ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ನ 2020-21 ನೇಸಾಲಿನ ಸಾಮಾನ್ಯ ಸಭೆಯಲಿ 203 ಸದಸ್ಯರು ಭಾಗವಹಿಸಿದ್ದರು.
ಮೇಘ ಸೌಹಾರ್ದ ಕ್ರೆಡಿಟ್ ಕೋ ಆಪರೇಟೀವ್  ಉಪಾದ್ಯಕ್ಷರಾದ ರಾಜಶೆಖರರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು.
 ಈ ಸಭೆಗೆ ಅಧ್ಯಕ್ಷತೆಯನ್ನು ಮೇಘಸಹಕಾರಿಯ ಅಧ್ಯಕ್ಷರಾದ ಕೆ. ಸತ್ಯನಾರಾಯಣ ರಾವ್ ವಹಿಸಿದ್ದರು. ನಿರ್ದೇಶಕರುಗಳಾದ ವಿ, ಹನುಮಂತರೆಡ್ಡಿ ರವರು, ವಿ,ವೆಂಕಟ್ ನಾರಾಯಣ, , ಮಹೇಶ್ ರೆಡ್ಡಿ, ನಾಗಭೂಷಣ ರೆಡ್ಡಿ, ವಿ,ಲಕ್ಷ್ಮೀದೇವಿ, ಕೆ. ನಾಗಭೂಷಣ ರೆಡ್ಡಿ, ಮಹೇಶ್ವರ ರೆಡ್ಡಿ, ಸಿ.ಈ,ಓ, ಅಶ್ವತ್ ರೆಡ್ಡಿ, ನಿರ್ಧಶಕರ ಮಂಡಳಿಯವರು, ಸರ್ವಸದಸ್ಯರುಗಳು ಭಾಗವಹಿಸಿದ್ದರು.
ಅಧ್ಯಕ್ಷರಾದ ಕೆ. ಸತ್ಯನಾರಾಯಣ ರಾವ್ 6ನೇ ವಾರ್ಷಿಕ ಮಹಾಸಬೆಯಲ್ಲಿ 2020-21 ನೇ ಸಾಲಿನ ವರದಿಯನ್ನು ಮಂಡಿಸುತ್ತಾ, ಮೇಘ ಸಹಕಾರಿಯು 2015-16 ನೇ ಸಾಲಿನಲ್ಲಿ ಪ್ರಾರಂಭಗೊಂಡು ಆರು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುರುತ್ತದೆ ಎನ್ನುವುದನ್ನು ತಮಗೆ ತಿಳಿಸಲು ಹರ್ಷವಾಗುತ್ತದೆ, ಸಹಕಾರಿಯು 15 ಲಕ್ಷಗಳ ಬಂಡವಾಳದೊಂದಿಗೆ ಪ್ರಾರಂಭಿಸಿ ಇಂದಿಗೆ 9 ಕೋಟಿಗಳ ದಾಟಿ ವ್ಯವಹಾರ ನಡೆದಿರುತ್ತದೆ ಕಳೆದ ವರ್ಷ 2020-21 ನೇಸಾಲಿನಲ್ಲಿ  ನಾಲ್ಕನೇ ಭಾರಿಗೆ ಸಹಕಾರಿಯು ಲಾಭಬಂದಿದ್ದು ಅದರಲ್ಲಿ  ನಿವ್ವಳ ಲಾಭ ರೂ 1033452/- ಲಕ್ಷ ಲಾಭ ಬಂದಿರುತ್ತದೆ, ಮತ್ತು ನಿವ್ವಳ ಲಾಭದಲ್ಲಿ ಸಹಕಾರಿಯ ಕಾಯ್ದೆಅನ್ವಯ ಶೇಕಡ 52% ಮೀಸಲು ನಿಧಿಗೆ ಕಾಯ್ದಿರಿಸಿ ಇನ್ನುಳಿದ ಶೇಕಡ 48 ರನ್ನು ಸದಸ್ಯರುಗಳಿಗೆ ಶೇಕಡ 4.53% ಪ್ರತಿಶತ ಲಾಭಂಶವನ್ನು ಘೋಷಿಸಿದರು.
ಸಹಕಾರಿಯು ತನ್ನ ವ್ಯವಹಾರವನ್ನು 2015-16 ರಲ್ಲಿ ಪ್ರಾರಂಭಿಸಿ ಸದಸ್ಯರುಗಳಿಗೆ ವಿವಿದ ಸೇವಗಳನ್ನು ನೀಡುತ್ತಾ ಬಂದಿರುತ್ತದೆ,  ಸದಸ್ಯರುಗಳಿಗೆ ವ್ಯಯಕ್ತಿಕ ವ್ಯಾಪಾರದ ಚಟುವಟಿಕೆಗಳಿಗೆ ತಕ್ಕಂತೆ ಸಾಲಗಳನ್ನು ನೀಡುಲಾಗುತ್ತಿದೆ, ಸದಸ್ಯರುಗಳ ಅನುಕೂಲತೆ ದೃಷ್ಠಿಯಿಂದ  ವಯಕ್ತಿಕ ಮತ್ತು ವಾಹನಗಳ ವಿಮಾ ಸೌಲಭ್ಯಗಳನ್ನು  ವಿಮಾಕಂಪನಿಗಳಿಂದ ಸೇವೆಯನ್ನು ನೀಡಲಾಗುತ್ತಿದೆ, ಸಹಕಾರಿಯ ಬೆಳವಣೆಗೆಯ ದೃಷ್ಠಿಯಿಂದ ಹಲವಾರು ಹೊಸ ಉಳಿತಾಯ ಠೇವಣೆಗಳನ್ನು ತೆರೆಯಲು ನಿರ್ದೇಶಕ ಮಂಡಳಿಯಲ್ಲಿ ಈ ಗಾಗಲಿ ಚರ್ಚಿಸಲಾಗಿದ್ದು ಇನ್ನು ಅನೇಕ ಯೋಜನೆಗಳನ್ನು ಮುಂದಿನ ವರ್ಷ ಹಾಕಿಕೊಳ್ಳಲು ತೀರ್ಮಾನಿಸಲಾಗಿದೆ.
ಈ ಸಹಕಾರಿಯ ಬೆಳವಣಿಗೆಗೆ ನಮ್ಮ ಹಿತೈಷಿಗಳು, ನಿರ್ದೇಶಕ ಮಂಡಳಿಯವರು, ಸಿಬ್ಬಂದಿ ವರ್ಗದವರು, ಸದಸ್ಯರುಗಳು, ಹಾಗು ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಸಹಕಾರ ನೀಡುತ್ತಾ ಬಂದಿರುತ್ತಾರೆ, ಅದೇ ರೀತಿ ಮುಂದಿನ ದಿನಗಳಲ್ಲಿ ಇದೇ ರೀತಿಯ ಸಹಕಾರವನ್ನು ತಾವೆಲ್ಲರು ನೀಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಮತ್ತು ಈ ಸಾಮಾನ್ಯ ಸಭೆಗೆ ಬಂದಿರುವ ಎಲ್ಲರಿಗೂ ಧನ್ಯವಾಧಗಳನ್ನು ಅರ್ಪಿಸಿದರು.
2020-21 ನೇ ಸಾಲಿನ ನಡುವಳಿಗಳನ್ನು ಸಭೆಯಲ್ಲಿ ಸದಸ್ಯರು ಚಪ್ಪಾಳೆತಟ್ಟುವ ಮೂಲಕ ಅನುಮೋಧಿಸಿದರು ನಂತರ ವೆಂಕಟನಾರಾಯಣ ವಂದಿಸಿದರು.