
ಸಂಜೆವಾಣಿ ವಾರ್ತೆ
ಕುರುಗೋಡು:ಸೆ.15: ಸರ್.ಎಂ. ವಿಶ್ವೇಶ್ವರಯ್ಯ ಅವರು ನಮ್ಮ ನಾಡು ಕಂಡ ಅತ್ಯಂತ ಶ್ರೇಷ್ಠ ಹಾಗೂ ದೂರದೃಷ್ಟಿಯುಳ್ಳ ಚೇತನವಾಗಿದ್ದರು ಎಂದು ಮೇಘನಾ ಶಾಲೆಯ ಕಾರ್ಯದರ್ಶಿ ಸಿದ್ದಪ್ಪ ತಿಳುಸಿದರು.
ಪಟ್ಟಣ ಸಮೀಪದ ಕಲ್ಲುಕಂಭ ಮೇಘನಾ ಶಾಲೆಯಲ್ಲಿ ಶುಕ್ರವಾರ ಸರ್.ಎಂ. ವಿಶ್ವೇಶ್ವರಯ್ಯ ಜನ್ಮ ದಿನ ಆಚರಿಸಿ ಮಾತನಾಡಿದ ಅವರು, ರಾಜ್ಯದ ಚಿತ್ರವನ್ನೇ ಬದಲಾಯಿಸಿದ ಕೀರ್ತಿ ವಿಶ್ವೇಶ್ವರಯ್ಯ ಅವರಿಗೆ ಸಲ್ಲಬೇಕಾಗಿದೆ. ಮುಂದಿನ ಪೀಳಿಗೆಗೆ ವಿಶ್ವೇಶ್ವರಯ್ಯ ಅವರು ಆದರ್ಶವಾಗಿರಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮೇಘನಾ ಶಾಲೆಯ ಗೌರವಾಧ್ಯಕ್ಷ ಕಡಲೆ ಈರಣ್ಣ, ಮುಖ್ಯ ಶಿಕ್ಷಕ ಡಿ.ಎಲ್ ನಾಗರಾಜ್, ಸಹ ಶಿಕ್ಷಕರಾದ ಶ್ರೀನಿವಾಸ್ ಕೆ, ಶಾರದಾ, ಚಿನ್ನಮ್ಮ, ಗಂಗಾ, ಸರಸ್ವತಿ, ಸಲ್ಮಾ ಬೇಗಮ್, ಮಂಜುಳಾ, ನೇತ್ರ , ರಾಜ, ಹರೀಶ್ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.