ಮೇಘನಾಥಗೆ ಎರಡನೇ ಸ್ಥಾನ

ಕಲಬುರಗಿ: ಜೂ.22:ಜೂ. 16 ಹಾಗೂ 17 ರಂದು ಹುಬ್ಬಳ್ಳಿಯಲ್ಲಿ ಇರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಅಂತರ ವಲಯ ಯುವಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಈ ಯುವಜನೋತ್ಸವದಲ್ಲಿ ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗಾಯನ, ಚರ್ಚಾಸ್ಫರ್ಧೆ ಹಾಗೂ ಡೊಳ್ಳುಕುಣಿತ ದಲ್ಲಿ ಭಾಗವಹಿಸಿದ್ದರು.

ಇದರಲ್ಲಿ ಕಾನೂನು ಮೂರು ವರ್ಷದಅಂತಿಮ ಸೆಮಿಸ್ಟರನ ವಿದ್ಯಾರ್ಥಿಯಾದ ಮೇಘನಾಥ ಚರ್ಚಾಸ್ಫರ್ಧೆಯಲ್ಲಿ ಎರಡನೇ ಸ್ಥಾನವನ್ನು ಪಡೆದಿರುತ್ತಾನೆ. ಇದಕ್ಕೆ ಕೆಪಿಇ ಸೊಸಾಯಿಟಿಯ ಕಾರ್ಯದರ್ಶಿ ಶಾಂತಪ್ಪ ಸೂರನ, ಆಡಳಿತಾಧಿಕಾರಿ ಡಾ. ಚಂದ್ರಶೇಖರ್ ಶೀಲವಂತ, ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಡಾ. ಎಸ್‍ಚಂದ್ರಶೇಖರ್, ಕಾಲೇಜಿನ ಬೋಧಕ ಸಿಬ್ಬಂದಿಗಳಾದ ಡಾ. ಅರ್ಪಣಾಜೆ ಶಿಂಧೆ, ಡಾ. ತಿಪ್ಪೆಸ್ವಾಮಿ ಎಸ್ ಹಾಗೂ ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.