ಮೇಗಳಪೇಟೆ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ.

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಏ.17; ಪಟ್ಟಣದ ಮೇಗಳಪೇಟೆ ಕೊಟ್ಟೂರು ವೃತ್ತದ ಬಳಿ ಇರುವ ಶ್ರೀ ಆಂಜನೇಯ ಸ್ವಾಮಿಯ 25ನೇ ವರ್ಷದ ರಥೋತ್ಸವ ಅದ್ದೂರಿಯಾಗಿ ಜರುಗಿತು. ಪಟ್ಟಣದ ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷರಾರ ಶ್ರೀ ವರಸದ್ಯೋಜಾತ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಹಡಗಲಿ, ಹರಪನಹಳ್ಳಿ ಗವಿಸಿದ್ದೇಶ್ವರ ಶಾಖಾ ಮಠದ ಡಾ ಹಿರಿಶಾಂತವೀರ ಸ್ವಾಮಿಗಳು, ಗುರುಪಾದಸ್ವಾಮಿ ಮಠದ ಗಿರೀಶ್ ಸ್ವಾಮಿಗಳು ಉಪಸ್ಥಿತರಿದ್ದರುಆಂಜನೇಯ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ನಿರ್ದೇಶಕ ಕೆ.ಆರ್.ಗಿರೀಶ್ ಅವರು ಈ ವರ್ಷದ ಆಂಜನೇಯ ಸ್ವಾಮಿಯ ಪಟಾಕ್ಷಿಯನ್ನು ಐದು ಸಾವಿರದ ಒಂದು ರೂಪಾಯಿಗೆ ಪಡೆದುಕೊಂಡರು. ಉಪ್ಪಿನ ವ್ಯಾಪಾರದ ಬಂಧುಗಳು ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದರು. ಪಟ್ಟಣದ ತೆಗ್ಗಿನಮಠ ಸಂಸ್ಥಾನದ ಕಾರ್ಯದರ್ಶಿ ಡಾ ಟಿ.ಎಂ.ಚಂದ್ರಶೇಖರಯ್ಯ, ದೇವಸ್ಥಾನದ ಧರ್ಮಕರ್ತ ಪಿ.ಬಿ.ಗೌಡ, ಸದಸ್ಯರಾದ ಬಿ.ಎಂ.ಉಮಾಪತಯ್ಯ, ಕಾಳಗಿ ಸಂಗಪ್ಪ, ಪಿ.ಕರಿಬಸವನಗೌಡ, ಟಿ.ಎಂ.ವೀರೇಶ್, ಸಿ.ಎಂ.ಕೊಟ್ರಯ್ಯ, ಬಿ.ಸೋಮಶೇಖರ, ಹಾಲದಕಟ್ಟಿ ಕೊಟ್ರೇಶ, ಕೆ.ಜದೀಶ್ ಗೌಡ, ಬೆನ್ನೂರು ಮಂಜುನಾಥ, ಪ್ರವೀಣ್ ಗೌಡ, ಉಪನ್ಯಾಸಕ ಸಂಕಪ್ಪನವರ ಕೊಟ್ರೇಶ್, ಬಿ.ಎಂ.ಕೊಟ್ರೇಶ್, ಜಿ.ಎಂ.ವಾಗೀಶ್ ಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.