ಮೇಕ್ ಇನ್ ಇಂಡಿಯಾ ಸ್ವಯಂ ಉದ್ಯೋಗ ಸೃಷ್ಟಿಗೆ ಅವಕಾಶ

ನವದೆಹಲಿ,ನ.೨೨- ‘ಮೇಕ್ ಇನ್ ಇಂಡಿಯಾ’, ‘ಲೋಕಲ್ ಫಾರ್ ವೋಕಲ್’ ನಂತಹ ಯೋಜನೆಗಳು ದೇಶದಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಅವಕಾಶ ಸೃಷ್ಟಿಸಲು ಸಹಕಾರಿಯಾಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.
ಪ್ರೊಡಕ್ಷನ್ ಲಿಂಕ್ ಇನಿಶಿಯೇಟಿವ್ (ಪಿಎಲ್‌ಐ) ಉತ್ಪಾದನೆ ಆಧಾರಿತ ಉಪಕ್ರಮ ಯೋಜನೆ ಹೊಸ ಉದ್ಯೋಗಾವಕಾಶಗಳ ತಾಣ. ಈ ಯೋಜನೆಯಡಿ ೬೦ ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
ಎರಡನೇ ಉದ್ಯೋಗ ಮೇಳದಲ್ಲಿ ದೇಶಾದ್ಯಂತ ೭೧,೦೫೬ ಮಂದಿ ಸರ್ಕಾರಿ ಉದ್ಯೋಗಕ್ಕೆ ನೇಮಕಗೊಂಡವರಿಗೆ ನೇಮಕಾತಿ ಪತ್ರ ಆನ್‌ಲೈನ್‌ನಲ್ಲಿ ವಿತರಿಸಿ ಮಾತನಾಡಿದ ಮೋದಿ “ಪಿಎಲ್‌ಐ ಯೋಜನೆಯಡಿಯಲ್ಲಿ ೬೦ ಲಕ್ಷ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಇದು ಮೇಕ್ ಇನ್ ಇಂಡಿಯಾ ಅಥವಾ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ ಎಂದಿದ್ದಾರೆ.ಈ ಎಲ್ಲಾ ಯೋಜನೆಗಳು ದೇಶದಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಹೊಸ ಅವಕಾಶ ಸೃಷ್ಟಿಸುತ್ತಿವೆ. ಅವಕಾಶಗಳೆಂದರೆ ಬರೀ ಸರ್ಕಾರಿ ಮತ್ತು ಸರ್ಕಾರೇತರ ಉದ್ಯೋಗಗಳು ನಿರಂತರವಾಗಿ ಹೆಚ್ಚುತ್ತಿವೆ ಎಂದು ಹೇಳಿದ್ದಾರೆ.ಅಮೃತ ಕಾಲದಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪವನ್ನು ಪುನರುಚ್ಚರಿಸಿದ ಪ್ರಧಾನಿ, ಈ ಅವಧಿಯಲ್ಲಿ ಹೊಸದಾಗಿ ನೇಮಕಗೊಂಡವರು ದೇಶದ ’ಸಾರಥಿ’ಯಾಗಿರುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಹೇಳಿದ್ದಾರೆ.”೪೫ ನಗರಗಳಲ್ಲಿ ೭೧,೦೦೦ ಯುವಕರಿಗೆ ನೇಮಕಾತಿ ಪತ್ರಗಳನ್ನು ನೀಡಲಾಗುತ್ತಿದ್ದು, ದಕ್ಷತೆ ಹೆಚ್ಚಿಸಲು ಸಾಮರ್ಥ್ಯ ವರ್ಧನೆಯಾಗುವ ರೀತಿ ಕೆಲಸ ಮಾಡಿಈ ಮೂಲಕ ಸಾವಿರಾರು ಕುಟುಂಬಗಳಳಲ್ಲಿ ಸಂತೋಷ ತರಲಿದೆ ಎಂದು ಅವರು ತಿಳಿಸಿದ್ದಾರೆ.”ದೇಶದ ಉಳಿದ ಜನರ ಮುಂದೆ, ಈ ಹೊಸ ಜವಾಬ್ದಾರಿಯನ್ನು ಹೊರಲು ಹೊರಟಿರುವ ನಿಮ್ಮೆಲ್ಲರನ್ನು ಒಂದು ರೀತಿಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ನೇಮಿಸಲಾಗುತ್ತಿದೆ” .ಸರ್ಕಾರದೊಳಗೆ ದಕ್ಷತೆಯನ್ನು ಹೆಚ್ಚಿಸಲು ಸಾಮರ್ಥ್ಯ ವರ್ಧನೆಯ ಮೇಲೆ ಕೆಲಸ ಮಾಡಲು ಹೊಸ ನೇಮಕಾತಿ ಸಹಕಾರಿಯಾಗಲಿ ಎಂದಿದ್ದಾರೆ.
ಈ ಸಂದರ್ಭದಲ್ಲಿ, ಜಮ್ಮು ಮತ್ತು ಕಾಶ್ಮೀರ, ಅಂಡಮಾನ್ ದ್ವೀಪಗಳು, ಗುಜರಾತ್, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು ಯುವಕರಿಗೆ ಉದ್ಯೋಗಾವಕಾಶ ಒದಗಿಸುವ ಕೇಂದ್ರ ಸರ್ಕಾರದ ಬದ್ದತೆಗೆ ಇದು ಸಾಕ್ಷಿ ಎಂದಿದ್ದಾರೆ.