ಮೇಕ್ಕೆಜೋಳ ಕ್ಷೇತ್ರೋತ್ಸವ


ಜಗಳೂರು, ನ.೧೩: ತಾಲೂಕಿನ ರಸ್ತೆ ಮಾಕುಂಟೆ ಗ್ರಾಮದಲ್ಲಿ ಗಂಗಾ ಕಾವೇರಿ ಬೀಜ ಕಂಪನಿಯವರು ’ಸೂಪರ್ ಕಿಂಗ್’ ತಳಿಯ ಮೆಕ್ಕೆಜೋಳ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ಪ್ರಗತಿ ಪರ ರೈತನಾದ ರಾಜಪ್ಪ ತಮ್ಮ ಜಮೀನಿನಲ್ಲಿ ಉತ್ತಮ ಇಳುವರಿ ಬಂದ ಸೂಪರ್ ಕಿಂಗ್ ತಳಿಯ ವೈಶಿಷ್ಟತೆ ಹಾಗೂ ಬೆಳೆಯ ನಿರ್ವಹಣೆಯ ಬಗ್ಗೆ ಇತರೆ ರೈತರಿಗೆ ತಿಳಿಸಿಕೊಟ್ಟರು.
ಈ ವೇಳೆ ಗಂಗಾ ಕಾವೇರಿ ಬೀಜ ಉತ್ಪನ್ನ ಕಂಪನಿಯ ವಿಭಾಗೀಯ ಅಧಿಕಾರಿ ಸೋಮಶೇಖರ್, ತಾಲೂಕು ಕ್ಷೇತ್ರಾಧಿಕಾರಿ ಪ್ರಕಾಶ್, ಕಂಪನಿಯ ಸಿಬ್ಬಂದಿ ಡಿ.ಡಿ. ಮಂಜುನಾಥ್ ಸೇರಿದಂತೆ ಗ್ರಾಮದ ವಿವಿಧ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.