
ವಿಜಯಪುರ:ಎ.14: ಬಬಲೇಶ್ವರ ತಾಲೂಕಿನ ಹೊಸುರು ಗ್ರಾಮದಲ್ಲಿ ಗ್ರಾಮ ಪಂಚಾಯತ ಕಾರ್ಯಲಯದಿಂದ ಮತದಾನದ ವಿಶೇಷ ಜಾಗೃತಿ ಕಾರ್ಯಕ್ರಮ ಪ್ರಯುಕ್ತ ಮಹೆಂದಿ ಹಚ್ಚುವ ಮೂಲಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಪಿಡಿಓ ಮಹಾನಂದಾ ಬಿರಾದಾರ ಚಾಲನೆ ನೀಡಿದರು. ಮೆಹಂದಿ ಮೂಲಕ ವಿಬಿನ್ನವಾಗಿ ಮತದಾರರ ಸಂದೇಶ ಸಾರುವ ಚುನಾವಣಾ ಆಯೋಗದ ಲಾಂಛನಗಳು, ದೇಶದ ನಕ್ಷೆ ಮತದಾನದ ಸಾಮಾಗ್ರೀಗಳು ವೋಟ್ ಪಾರ್ ಇಂಡಿಯಾ ನನ್ನ ಮತ ನನ್ನ ಹಕ್ಕು, ಮತದಾನ ನಮ್ಮೆಲ್ಲರ ಕರ್ತವ್ಯ ಹೀಗೆ ಮಹೆಂದಿಗಳನ್ನು ಬಿಡಿಸಿ ಮತದಾನ ಹೆಚ್ಚಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಸಾವಿತ್ರಿ ಬಡಚಿ ಸುನೀತಾ ದೊಡಮನಿ ಮೈರಾಜ್ ಗೌಂಡಿ ರೇಶ್ಮಾ ಕಿಲೇದಾರ ಜ್ಯೋತಿ ಕಲಕೇರಿ ಶಶಿಕಲಾ ಪಾಟೀಲ್ ಗೀತಾ ಸೊಂಟನವರ ಶಾಂತಾ ಪಟ್ಟನಶೆಟ್ಟಿ ಅಕ್ಷತಾ ಸೀಪರಮಟ್ಟಿ ಶಂಕ್ರಮ್ಮ ಯಾದವಾಡ ಸಾವಿತ್ರೀ ಬಡಚಿ ಐಇಸಿ ಸಂಯೋಜಕರಾದ ಶಾಂತಪ್ಪ ಇಂಡಿ ಇತರರು ಹಾಜರಿದ್ದರು.