ಮೆಹುಲ್ ಚೋಕ್ಸಿಯನ್ನು ನಾಗರಿಕನೆಂದು ಪರಿಗಣಿಸಿ

ನವದೆಹಲಿ, ಮೇ.29-ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 13,500 ಕೋಟಿ ರೂಪಾಯಿ ವಂಚನೆ ಮಾಡಿ ಅಂಟುಗವಾದಲ್ಲಿ ತಲೆಮರೆಸಿಕೊಂಡು ಸೆರೆ ಸಿಕ್ಕಿರುವ ವಂಚಕ ಉದ್ಯಮಿ ಮೆಹುಲ್ ಚೋಸ್ಕಿ ರಕ್ಷಣೆಗೆ ಆಂಟಿಗುವಾ ವಿರೋಧ ಪಕ್ಷ ಮುಂದಾಗಿದೆ.

ಈ ಸಂಬಂಧ ಅಂಟಿಗುವಾ ಮತ್ತು ಬಾರ್ಬರಡಾ ಪ್ರಧಾನಿ ಗಸ್ಟನ್ ಬ್ರೋನ್‍ಗೆ ಅವರಿಗೆ ಮನವಿ ಮಾಡಿರುವ ಅಲ್ಲಿನ ವಿರೋಧ ಪಕ್ಷ ಯುನೈಟೆಡ್ ಪ್ರೋಗ್ರೆಸೀಸ್ ಪಾರ್ಟಿ, ಮೆಹುಲ್ ಚೋಸ್ಕಿ ಅವರನ್ನು ದೇಶದ ನಾಗರಿಕ ಎಂದು ಪರಿಗಣಿಸಿ ಎಂದು ಒತ್ತಾಯಿಸಿದೆ.

ದೇಶದ ಪ್ರಜೆ ಎಂದು ಮೆಹುಲ್ ಚೋಸ್ಕಿ ಅವರನ್ನು ಪರಿಗಣಿಸಿ ದೇಶದ ಪ್ರಜೆಗೆ ಯಾವೆಲ್ಲಾ ಸೌಲಭ್ಯ ಸಿಗುತ್ತದೇ ಅದನ್ನು ಅವರಿಗೂ ನೀಡಿ ಎಂದು ಯುಪಿಪಿ ಪಕ್ಷ ಪ್ರಧಾನಿಗೆ ಒತ್ತಾಯ ಮಾಡಿದೆ.

ಆಂಟಿಗುವಾ ಪ್ರಧಾನಿ ನಿನ್ನೆಯಷ್ಟೇ ಸೆರೆ ಸಿಕ್ಕಿರುವ ಮೆಹೆಲ್ ಚೋಸ್ಕಿ ಅವರನ್ನು ನೇರವಾಗಿ ಭಾರತಕ್ಕೆ ಗಡಿಪಾರು ಮಾಡಲು ಎಲ್ಲಾ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿಕೆ ನೀಡಿದ್ದ ಬೆನ್ನಲ್ಲೇ ಅಲ್ಲಿನ ವಿರೋಧ ಪಕ್ಷ ಇಂತಹದೊಂದು ಬೇಡಿಕೆ ಸಲ್ಲಿಸಿದೆ.

ಆಂಟಿಗುವಾ ದೇಶದಲ್ಲಿ ತಲೆ ಮರೆಸಿಕೊಂಡಿದ್ದ ಮೆಹುಲ್ ಚೋಸ್ಕಿ ಡೊಮೋನಿಕ್ ಪೊಲೀಸರಿಗೆ ಸೆರೆ ಸಿಕ್ಕಿದ್ದ. ವಜ್ರದ ವ್ಯಾಪಾರಿ ಮೆಹುಲ್ ಚೋಸ್ಕಿ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 13,500 ಕೋಟಿ ರೂಪಾಯಿ ಮೊತ್ತವನ್ನು ಸೋದರ ಸಂಬಂಧಿ ನೀರವ್ ಮೋದಿ ಜೊತೆ ಸೇರಿ ವಂಚಿಸಿ ದೇಶ ಬಿಟ್ಟು ಪರಾರಿಯಾಗಿದ್ದರು.

ಮೆಹುಲ್ ಚೋಸ್ಕಿ ಆಂಟಿಗುವಾದಲ್ಲಿ ಆಶ್ರಯ ಪಡೆದರೆ ನೀರವ್ ಮೋದಿ ಲಂಡನ್ ನಲ್ಲಿ ತಲೆ ಮರೆಸಿಕೊಂಡಿದ್ದಾರೆ. ಇಬ್ಬರನ್ನು ಭಾರತಕ್ಕೆ ಕರೆ ತರುವ ಕೆಲಸ ಸಾಗಿದೆ.