ಮೆಹಬೂಬ ಮೆಚ್ಚುಗೆ ಮಹಾಪೂರ

ಬಿಗ್ ಬಾಸ್ ಖ್ಯಾತಿಯ ಶಶಿ ನಾಯಕನಾಗಿ ನಟಿಸಿರುವ “ಮೆಹಬೂಬ” ಚಿತ್ರಕ್ಕಾಗಿ ರಘುಶಾಸ್ತ್ರಿ ಬರೆದಿರುವ “ದೇವರು ದೇವರು” ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಮನೋಜವಂ ಆತ್ರೇಯ ಹಾಡಿರುವ ಗೀತೆಗೆ ಮ್ಯಾಥ್ಯೂಸ್ ಮನು ಸಂಗೀತ ನೀಡಿದ್ದಾರೆ.ಹಾಡಿಗೆ ಮೆಚ್ಚುಗೆಯ ಮಹಾಊರ ಹರಿದು ಬಂದಿದೆ.

ಪ್ರಸನ್ನ ಶ್ರೀನಿವಾಸ್ ನಿರ್ಮಿಸುತ್ತಿರುವ ಚಿತ್ರವನ್ನು ಅನೂಪ್ ಆಂಟೊನಿ ನಿರ್ದೇಶಿಸುತ್ತಿದ್ದಾರೆ. ಕೇರಳದಲ್ಲಿ ನಡೆದ ನೈಜಘಟನೆ ಆಧರಿಸಿಚಿತ್ರ ಸಿದ್ಧವಾಗುತ್ತಿದೆ. ಚಿತ್ರೀಕರಣ ಮುಕ್ತಾಯ ಹಂತ ತಲುಪಿದ್ದು, ಪೆÇೀಸ್ಟ್ ಪೆÇ್ರಡಕ್ಷನ್ ಬಿರುಸಿನಿಂದ ಸಾಗಿದೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ.

ಯೋಗರಾಜ್ ಭಟ್ ಹಾಗೂ ರಘುಶಾಸ್ತ್ರಿ ರಚಿಸಿದ್ದಾರೆ. ಸಂಭಾಷಣೆ ರಘುಶಾಸ್ತ್ರಿ ಬರೆದಿದ್ದಾರೆ.ಕಿರಣ್ ಹಂಪಾಪುರ ಛಾಯಾಗ್ರಹಣವಿದೆ. ಶಶಿ, ಪಾವನ ಗೌಡ, ಕಬೀರ್ ದುಹಾನ್ ಸಿಂಗ್, ಸಲ್ಮಾನ್ ಬುಲೆಟ್ ಪ್ರಕಾಶ್, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಕಲ್ಯಾಣಿರಾಜು, ಸಂದೀಪ್, ಧನರಾಜ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.