
ಬಾಗಲಕೋಟೆ, ಏ28: ನಗನರದ ಸೆಕ್ಟರ ನಂ.46 ರಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಮೆಹಂದಿಯಲ್ಲಿ ವಿವಿಧ ಘೋಷಣೆಗಳನ್ನು ಹಾಕಿಕೊಳ್ಳುವ ಮೂಲ ಮತದಾನದ ಜಾಗೃತಿ ಮೂಡಿಸಲಾಯಿತು.
ಪ್ರತಿಯೊಂದು ವಿದ್ಯಾರ್ಥಿಗಳು ಅವರ ಅಂಗೈಗಳ ಮೇಲೆ ನಮ್ಮ ಮತ ನನ್ನ ಹಕ್ಕು, ಮೈ ಓಟ್ ಮೈ ಪ್ಯೂಚರ್ ಎಂಬ ಮತದಾನ ಜಾಗೃತಿಯ ಘೋಷಣೆಗಳನ್ನು ಹಾಕಿಕೊಂಡು ಪ್ರದರ್ಶಿಸಿದರು. ಪ್ರಥಮ ಬಾರಿಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಲು ಗೊಂದಲ ಮತ್ತು ಮುಜುಗರ ಆಗುವದನ್ನು ತಪ್ಪಿಸಲು ಪೂರ್ವ ನಿಯೋಜಿತವಾಗಿ ಅಣಕು ಮತ ಯಂತ್ರ ಸೃಷ್ಟಿಸಿ ಮತದಾನ ಮಾಡುವ ಬಗ್ಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಸಿ.ಆರ್.ಮುಂಡರಗಿ, ಜಿ.ಪಂ ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಚವ್ಹಾಣ, ವಸತಿ ನಿಲಯದ ಅಧೀಕ್ಷಕ ಶಿವು ದರ್ಗದ, ವಾರ್ಡನ್ ರೇಷ್ಮಾ ಕಾತರಕಿ, ಸುರೇಶ ಬಡಿಗೇರ, ವಾರ್ಡನ್‍ಗಳಾದ ಯಲಗುರದಪ್ಪ ತಳವಾರ, ರಮೇಶ ಮಡಿವಾಳ, ಆನಂದ ಪಾಟೀಲ, ಜಕ್ಕಪ್ಪನವರ ಸೇರಿದಂತೆ ಇತರರು ಇದ್ದರು.