ಮೆಸ್ಸಿ ಜಗತ್ತಿನ ಉತ್ತಮ ಆಟಗಾರ

ಪ್ಯಾರೀಸ್,ನ.೩೦- ಖ್ಯಾತ ಫುಟ್ಬಾಲ್ ಆಟಗಾರ, ಅರ್ಜೆಂಟೀನಾದ ಲಯೋನೆಲ್
ಮೆಸ್ಸಿ ವಿಶ್ವದ ಉತ್ತಮ ಫುಟ್ಬಾಲ್ ಆಟಗಾರ ವಿಭಾಗದಲ್ಲಿ ಪ್ರತಿಷ್ಠಿತ ಬಾಲನ್ ಡಿ’ಓರ್
ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.
೭ ಬಾರಿ ಈ ಪ್ರಶಸ್ತಿ ಮುಡಿಗೇರಿಸಿಕೊಂಡು ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಈ
ಪ್ರಶಸ್ತಿ ಗೌರವಕ್ಕೆ ಪಾತ್ರಾಗಿದ್ದ ರಾಬರ್ಟ್ ಲೆವಂಡೊಸ್ಕಿ ಮತ್ತು ಜಾರ್ಗಿನ್ ಹೋ ಅವರ
ದಾಖಲೆ ಸರಿಗಟ್ಟಿದ್ದಾರೆ.
ಫ್ರ್ಯಾನ್ಸ್ ಫುಟ್ಬಾಲ್ ನಿಯತಕಾಲಿಕೆ ಬಾಲನ್ ಡಿ’ಓರ್ ಪ್ರಶಸ್ತಿ ನೀಡುತ್ತದೆ. ೨೦೦೯,
೨೦೧೦, ೨೦೧೧, ೨೦೧೨, ೨೦೧೫ ಮತ್ತು ೨೦೧೯ ರಲ್ಲಿ ಲಯೋನಲ್ ಮೆಸ್ಸಿ ಈ ಪ್ರಶಸ್ತಿ
ಪಡೆದುಕೊಂಡಿದ್ದರು. ಕಳೆದ ವರ್ಷ ಜುಲೈ ತಿಂಗಳಲ್ಲಿ ಅರ್ಜೆಂಟೀನಾಗೆ ಮೊದಲ ಬಾರಿಗೆ
ಕೋಪಾ ಅಮೆರಿಕಾ ಟ್ರೋಪಿಯನ್ನು ತಂದುಕೊಟ್ಟಿದ್ದರು. ಇದೀಗ ಮತ್ತೆ ೭ ನೇ ಬಾರಿಗೆ
ಡಿ’ಓರ್ ಪ್ರಶಸ್ತಿ ಗೌರವಕ್ಕೆ ಮೆಸ್ಸಿ ಪಾತ್ರರಾಗಿದ್ದಾರೆ.
‘ಕಳೆದ ಎರಡು ವರ್ಷಗಳ ಹಿಂದೆ ಸಿಕ್ಕಿದ್ದ ಪ್ರಶಸ್ತಿಯೇ ಕೊನೆ ಎಂದು ಭಾವಿಸಿದ್ದೆ.
ಕೋಪಾ ಅಮೆರಿಕಾ ಟ್ರೋಫಿ ಗೆದ್ದಿದ್ದು, ಮತ್ತೆ ಪ್ರಶಸ್ತಿ ಗೌರವಕ್ಕೆ ಭಾಜನರಾಗುವಂತೆ
ಮಾಡಿದೆ’ ಎಂದು ಮೆಸ್ಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಮಹಿಳಾ ವಿಭಾಗ: ಸ್ಪೈನ್ ಫುಟ್ಬಾಲ್ ಆಟಗಾರ್ತಿ ಅಲೆಕ್ಸಿಯಾ ಪುಟೆಲ್ಲಾ ಅವರು ಮಹಿಳಾ
ವಿಭಾಗದಲ್ಲಿ ಬಾಲನ್ ಡಿ’ಓರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ೨೭ ವರ್ಷದ ಅಲೆಕ್ಸಿಯಾ
ಡಿ’ಓರ್ ಪ್ರಶಸ್ತಿ ಪಡೆದ ೩ ನೇ ಮಹಿಳೆಯಾಗಿದ್ದಾರೆ. ಕಳೆದ ವರ್ಷ ಮೆಗನ್ ರಾಪಿನೋ ಈ
ಪ್ರಶಸ್ತಿ ಪಡೆದಿದ್ದರು.