ಮೆರವಣಿಗೆ ಮೂಲಕ ಕನ್ನಡ ಜ್ಯೋತಿ ಪ್ರತಿಷ್ಠಾಪನೆ

ಹೊಸಪೇಟೆ ನ 01 : ತಾಲೂಕಿನಲ್ಲಿ 65ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಕಾಸ ಯುವಕ ಮಂಡಳಿ, ಸ್ಪೂರ್ತಿ ವೇದಿಕೆ ಹಾಗೂ ಸರಕಾರಿ ನೌಕರರ ಸಂಘದ ಸದಸ್ಯರು ನಗರದ ವಡಕರಾಯನ ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ಮೂಲಕ ಕನ್ನಡ ಜ್ಯೋತಿಯನ್ನು ತಂದು ಪ್ರತಿಷ್ಠಾಪಿಸಿದರು.