ಮೆರವಣಿಗೆಗೆ ಸಿದ್ಧಗೊಂಡಿರುವ ಎತ್ತಿನಬಂಡಿ

ಹೊಸಪೇಟೆ, ನ.19: ನಗರದಲ್ಲಿ ನಡೆಯುತ್ತಿರುವ 67ನೇ ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿರುವ 108 ಎತ್ತಿನಬಂಡಿಗಳ ಮೆರವಣಿಗೆಗಾಗಿ ವಡಕರಾಯನ ದೇವಸ್ಥಾನದ ಬಳಿ ಎತ್ತಿನಬಂಡಿ ಮಾಲೀಕರು ತಮ್ಮ ಎತ್ತುಗಳನ್ನು ಬಂಡಿ ಸಮೇತ ಸಿದ್ಧಪಡಿಸಿದ್ದರು.
ಮೆರವಣಿಗೆಯಲ್ಲಿ ಭಾಗವಹಿಸುವ ಪ್ರತಿ ಎತ್ತಿನಬಂಡಿಗೆ 2500 ಪ್ರೋತ್ಸಾಹ ಧನ ನೀಡಲಾಗುತ್ತದೆ. ಮೆರವಣಿಗೆಯಲ್ಲಿ ಅತ್ಯುತ್ತಮವಾಗಿ ಸಿಂಗಾರಗೊಂಡ ಎತ್ತಿನಬಂಡಿಗಳಿಗೆ 25 ಸಾವಿರ, 15 ಸಾವಿರ ಹಾಗೂ 10 ಸಾವಿರ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್ ಅವರು ವೈಯಕ್ತಿಕವಾಗಿ ನೀಡಲಿದ್ದಾರೆ.
ಶಂಕರ್ ಆನಂದ್ ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಜಿ ಕನಕೇಶ ಮೂರ್ತಿ, ಸಹಾಯಕ ಪ್ರಾಧ್ಯಾಪಕರಾದ ನಟರಾಜ ಪಾಟೀಲ್, ಡಣಾಪುರ ಸರ್ಕಾರಿ ಪ್ರೌಡಶಾಲೆಯ ಮುಖ್ಯಗುರುಗಳಾದ ಪದ್ಮನಾಭ ಕರ್ಣಂ ಹಾಗೂ ಪ್ರಭಾರಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಪಾಂಡುರಂಗ ನಿಕ್ಕಂ ತೀರ್ಪುಗಾರರಾಗಿದ್ದಾರೆ.
ಎತ್ತಿನಬಂಡಿ ಸಿಂಗಾರ, ಎತ್ತುಗಳಿಗೆ ಬಣ್ಣಾಲಂಕಾರ, ಬಂಡಿ ಮಾಲೀಕನ ವೇಷ ಭೂಷಣಗಳ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತದೆ ಎಂದು ತೀರ್ಪುಗಾರರೊಬ್ಬರು ತಿಳಿಸಿದರು.