ಮೆದುಳು ಜ್ವರ ಜಾಗೃತಿ ಕಾರ್ಯಕ್ರಮ

ಕೊಳಗಲ್ಲು, ಜ.13: ಪ್ರಾದೇಶಿಕ ಆರೋಗ್ಯ ಕೇಂದ್ರದಿಂದ ಸಿದ್ದಮ್ಮನಹಳ್ಳಿ ವ್ಯಾಪ್ತಿಯಲ್ಲಿ ಮೆದುಳು ಜ್ವರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ವೈದ್ಯಾಧಿಕಾರಿಗಳಾದ ಡಾ||ದಿವ್ಯಾ ರವರು ಮಾತನಾಡುತ್ತಾ, ಮೆದುಳು ಜ್ವರ ಕ್ಯೂಲೆಕ್ಸ ಜಾತಿಯ ಸೊಳ್ಳೆ, ರೋಗಗ್ರಸ್ಥ ಹಂದಿಗೆ ಕಚ್ಚಿ ನಂತರ 15 ವರ್ಷದೊಳಗಿನ ಮಕ್ಕಳಿಗೆ ಕಚ್ಚಿದರೆ ಈ ಜ್ವರ ಬರುತ್ತದೆ ಎಂದು ತಿಳಿಸಿದರು.
ಜ್ವರದ ಲಕ್ಷಣಗಳು:
ಮೆದುಳು ಜ್ವರದ ಲಕ್ಷಣಗಳೆಂದರೆ ಫಿಟ್ಸ್ ಬರುವುದು, ಕೈಕಾಲು ಸ್ವಾದೀನ ಕಳೆದುಕೊಂಡು ಪಾರ್ಶುವಾಯು ಬರುವುದು ಹಾಗೂ ಅಂಗವೈಕಲ್ಯವಾಗುವುದು, ಮನೆ ಸುತ್ತ ಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕರಾದ ಬಾಬುರಾವ್, ತಾ.ಪಂ. ಸದಸ್ಯರಾದ ಭೋಗರಾಜ್, ಗ್ರಾ.ಪಂ. ಸದಸ್ಯರು, ಆಶಾಕಾರ್ಯಕರ್ತರು, ಶಾಲಾ ಶಿಕ್ಷಕರು ಭಾಗವಹಿಸಿದ್ದರು.