ಮೆದಗಿನಕೆರೆ ಕೋವಿಡ್ ಸೆಂಟರ್ ಗೆ ಅಧಿಕಾರಿಗಳ ದಿಢೀರ್ ಭೇಟಿ

ಜಗಳೂರು.ಮೇ.೨;  ತಾಲ್ಲೂಕಿನ ಮೆದಗಿನಕೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಅವರ ಸಹಕಾರದೊಂದಿಗೆ  ಕೋವಿಡ್-19 ಕೇರ್ ಸೆಂಟರ್ ಪ್ರಾರಂಭಿಸಲಾಗಿದ್ದು. ಕೋವಿಡ್-19 ಕೇರ್ ಸೆಂಟರ್ ನೋಡಲ್ ಅಧಿಕಾರಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪರಮೇಶ್ವರಪ್ಪ ಭೇಟಿ ಮತ್ತು  ಜಿಲ್ಲಾ ಉಪವಿಭಾಗ ಅಧಿಕಾರಿ ಮಮತ ಹೊಸಗೌಡರ್ ಭೇಟಿ ನೀಡಿದರು. ನಂತರ ಮಾತನಾಡಿದ ಅವರು ಸುಸಜ್ಜಿತ ಬೆಡ್ ಹಾಸಿಗೆ ದಿಂಬು ಶುದ್ದ ನೀರು ಗಾಳಿ ಪೌಷ್ಠಿಕ ಆಹಾರ ಸ್ವಚ್ಛತೆ ,ಶೌಚಾಲಯ,ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನ ಕೋವಿಡ್ ಕೇರ್ ಸೆಂಟರ್ ನಲ್ಲಿ  10 ಕೊಠಡಿಗಳಲ್ಲಿ 50 ಬೆಡ್ ಗಳನ್ನು ಹೊಂದಲಾಗಿದ್ದು ಇದೀಗ 11 ಜನ ಸೋಂಕಿತರು ಚಿಕಿತ್ಸೆ  ಪಡೆಯುತ್ತಿದ್ದಾರೆ ಎಂದರು.ನಂತರ  ಕೊರೊನಾ ಸೋಂಕಿತರ ಯೋಗಕ್ಷೇಮ ವಿಚಾರಿಸಿ ಅವರಿಗೆ ಬಿಸಿನೀರು ಶುದ್ಧಕುಡಿಯುವ ನೀರು ಮೂಲಭೂತ ಸೌಲಭ್ಯಗಳ ಕೊರತೆ ಇಲ್ಲದಂತೆ ನೋಡಿಕೊಳ್ಳಬೇಕು.  ಪ್ರತ್ಯೇಕ ಶೌಚಾಲಯ ಔಷಧಿ ಸಂಗ್ರಹಣ ಕೊಠಡಿ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಹೊಂದಲಾಗಿದೆ ಚಿಕಿತ್ಸೆನೀಡಲು ವೈದ್ಯರು ಸಿಬ್ಬಂದಿಗಳು ಉಸ್ತುವಾರಿಯಾಗಿ ಸಹಾಯಕ ನೋಡಲ್ ಅಧಿಕಾರಿ ಮತ್ತು ಸದಸ್ಯರ ತಂಡ ನಿಯೋಜಿಸಲಾಗಿದೆ ಇನ್ನು ಅಗತ್ಯವಿದ್ದರೆ ಪಕ್ಕದ ಕೊಠಡಿಯಲ್ಲಿ 50 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ಗೆ ಸಕಲ ಸಿದ್ಧತೆ ಮಾಡಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ನಾಗವೇಣಿ . ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ್ವರಪ್ಪ . ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಲ್ಲನಾಯ್ಕ್. ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜಪ್ಪ ದಿದ್ದಿಗಿ. ಶಾಲೆಯ ಪ್ರಾಂಶುಪಾಲರಾದ ರೂಪಕಲಾ ಹಾಗೂ ವಾರ್ಡನ್ ಗಳು ಮತ್ತು ಕೋವಿಡ್ ಕೇರ್ ಸಿಬ್ಬಂದಿಗಳು ಹಾಜರಿದ್ದರು