ಮೆಥೋಡಿಸ್ಟ್ ಚರ್ಚ್ ಚಿದ್ರಿಯಲ್ಲಿ ಸುಗ್ಗಿ ಹಬ್ಬ

ಬೀದರ :ನ.9:ತಾಲ್ಲೂಕಿನ ಮೆಥೋಡಿಸ್ಟ್ ಚರ್ಚ್ ಚಿದ್ರಿ ಬೀದರನಲ್ಲಿ ದಿನಾಂಕ: 08-11-2020 ಸಮಯ 6:00 ಗಂಟೆ ಭಾನುವಾರದಂದು ಸದರಿ ಚರ್ಚಿನ ಸಭಾಪಾಲಕರಾದ ರೇವರೆಂಡ್ ಸೈಮನ್ ಮಾರ್ಕ್ ಮತ್ತು ಚರ್ಚಿನ ಸಭಿಕರ ನೇತೃತ್ವದಲ್ಲಿ ಚರ್ಚಿನ ಆವಣರದಲ್ಲಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪ್ರಾರ್ಥನೆ ಮಾಡುವುದರ ಮೂಲಕ ಸುಗ್ಗಿ ಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಸಭಿಕರು ತಮ್ಮ ತಮ್ಮ ಮನೆಯಿಂದ ತಿಂಡಿ, ತಿನಿಸುಗಳು ತೆಗೆದುಕೊಂಡು ಬಂದು ಹಾಗೂ ಹೊಲದಲ್ಲಿ ಬೆಳೆದ ಪ್ರಥಮ ಬೆಳೆಯ ಪಾಲು ಚರ್ಚಿಗೆ ಕಾಣಿಕೆಯಾಗಿ ಸಮರ್ಪಿಸುವುದರ ಮೂಲಕ ಸುಗ್ಗಿ ಹಬ್ಬ ಆಚರಣೆ ಮಾಡಲಾಯಿತು.
ದೈವ ಸಂದೇಶಕರಾದ ಶ್ರೀ ಸೈಮನ್ ಮಾರ್ಕ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ, ಸುಗ್ಗಿ ಹಬ್ಬದ ಮುಖ್ಯ ಉದ್ದೇಶ: ಬೆಳೆಯ ಪ್ರಥಮ ಫಲ ದೇವರಿಗೆ ಅರ್ಪಿಸುವುದು ಹಾಗೂ ನಮ್ಮ ಹೃದಯವನ್ನು ಮೀಸಲಾಗಿಯೂ, ಮೆಚ್ಚಿಕೆಯಾಗಿಯೂ ದೇವರಿಗೆ ಸಮರ್ಪಿಸುವುದೇ ಮುಖ್ಯ ಉದ್ದೇಶವಾಗಿದೆ ಎಂದು ದೈವ ಸಂದೇಶ ನೀಡಿದರು ಹಾಗೂ ನಂತರ ವಿಶೇಷ ಹಾಡನ್ನು ಹಾಡುವುದರ ಮೂಲಕ ದೇವರಿಗೆ ಮಹಿಮೆ ಸಲ್ಲಿಸಲಾಯಿತು. ದೇವರಿಗೆ ನಮ್ಮ ಆದಾಯದಲ್ಲಿ ಹತ್ತರಲ್ಲೊಂದು ಪಾಲು ಹಾಗೂ ದೇವರ ಉಪಕಾರಗಳನ್ನು ಸ್ಮರಿಸಿ, ತನು, ಮನ, ಧನ ಸಮರ್ಪಣೆಯೇ ಇದಕ್ಕೆ ಸುಗ್ಗಿ ಹಬ್ಬ ಎನ್ನುತ್ತಾರೆ ಎಂದು ಚರ್ಚಿನ ಸಭಾಪಾಲಕರಾದ ರೇವರೆಂಡ್ ಸೈಮನ್ ಮಾರ್ಕ ರವರು ಮಾತನಾಡಿದರು ಮತ್ತು ಈ ಕಾರ್ಯಕ್ರಮದಲ್ಲಿ ಮೆಥೋಡಿಸ್ಟ್ ಚರ್ಚ ಚಿದ್ರಿಯ ಸಭಾಪಾಲಕರು ಹಾಗೂ ಸಭಾಪಾಲನೆ ಸಮಿತಿ, ಹಿರಿಯರು, ಮಹಿಳೆಯರು, ಮಕ್ಕಳು, ಸೇರಿದಂತೆ ಎಲ್ಲರೂ ಭಾಗಿಯಾಗಿದ್ದರು ಎಂದು ಮೆಥೋಡಿಸ್ಟ್ ಚರ್ಚ್ ಚಿದ್ರಿ ಖಜಾಂಚಿಯಾದ ಶ್ರೀ ಸ್ವಾಮಿದಾಸ ಸುರೇಶ ರವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.